ಕರ್ನಾಟಕ

karnataka

ETV Bharat / bharat

ಕೆಚ್ಚೆದೆಯ ಸೈನಿಕರ ತ್ಯಾಗಕ್ಕೆ ಒಂದು ಸೆಲ್ಯೂಟ್.. ಸೇನೆಯಿಂದ ಹುತಾತ್ಮರಾದವರಿಗೆ ಗೌರವ! - ಪಾಕಿಸ್ತಾನದಿಂದ ಅಪ್ರಚೋದಿತ ದಾಳಿ

ಪಾಕ್ ಸೇನೆ ನಡೆಸಿದ ಅಪ್ರಚೋದಿತ ದಾಳಿಗೆ ಹುತಾತ್ಮರಾದ ಇಬ್ಬರು ಸೈನಿಕರಿಗೆ ಭಾರತೀಯ ಸೇನೆ ಗೌರವ ಸಲ್ಲಿಸಿದೆ.

ಸೇನೆಯಿಂದ ಹುತಾತ್ಮರಿಗೆ ಗೌರವ

By

Published : Oct 20, 2019, 10:51 PM IST

ನವದೆಹಲಿ: ಗಡಿ ಭಾಗದಲ್ಲಿ ಭಾರತ ಮತ್ತು ಪಾಕಿಸ್ತಾನ ಸೈನಿಕರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಸೈನಿಕರಿಗೆ ಭಾರತೀಯ ಸೇನೆ ಗೌರವ ಸಲ್ಲಿಸಿದೆ.

ಹವಾಲ್ದಾರ್‌ ಪದಮ್ ಬಹದ್ದೂರ್ ಶ್ರೇಷ್ಠ ಮತ್ತು ಗಾಮಿಲ್ ಕುಮಾರ್ ಶ್ರೇಷ್ಠ ಹುತಾತ್ಮ ಸೈನಿಕರಾಗಿದ್ದಾರೆ. ಈ ಬಗ್ಗೆ ಭಾರತೀಯ ಸೇನೆ ಮುಖ್ಯಸ್ಥ ಬಿಪಿನ್ ರಾವತ್​ ಸೇರಿ ಸೇನೆಯ ಎಲ್ಲಾ ಶ್ರೆಯಾಂಕದ ಅಧಿಕಾರಿಗಳಿಂದ ನಮ್ಮ ಕೆಚ್ಚೆದೆಯ ಸೈನಿಕರ ತ್ಯಾಗಕ್ಕೆ ಒಂದು ಸೆಲ್ಯೂಟ್. ಸೈನಿಕರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇವೆ ಎಂದು ಟ್ವೀಟರ್​ನಲ್ಲಿ ತಿಳಿಸಿದ್ದಾರೆ.

ಗಡಿ ಭಾಗದಲ್ಲಿ ಪಾಕ್ ನಡೆಸಿದ ಅಪ್ರಚೋದಿತ ದಾಳಿಯಿಂದ ಮೂವರು ನಾಗರಿಕರು ಗಾಯಗೊಂಡು, ಓರ್ವ ವ್ಯಕ್ತಿ ಬಲಿಯಾಗಿದ್ದರು. ಈ ನಡುವೆ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಅಡಗುದಾಣಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದೆ. ಉಗ್ರರ 3 ಲಾಂಚ್​ಪ್ಯಾಡ್​ಗಳನ್ನ ಧ್ವಂಸಗೊಳಿಸಿದ್ದು, 6-10 ಪಾಕ್​ ಸೈನಿಕರು ಹತರಾಗಿದ್ದಾರೆ ಎಂದು ಭೂ ಸೇನೆ ಮುಖ್ಯಸ್ಥ ಬಿಪಿನ್ ರಾವತ್​ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details