ನವದೆಹಲಿ: ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ನಡೆದ ಭಾರತ ಹಾಗೂ ಚೀನಾ ನಡುವಿನ ಸಂಘರ್ಷದಲ್ಲಿ ಭಾರತ ಸೇನೆಯ ಓರ್ವ ಸೇನಾಧಿಕಾರಿ ಹಾಗೂ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.
ಇಂದು ಹುತಾತ್ಮರಾದ ಇಬ್ಬರು ವೀರಯೋಧರಲ್ಲಿ ಓರ್ವ ಯೋಧ ಸಂತೋಷ್ ಬಾಬು. ಸೇನೆಯಲ್ಲಿ ಕರ್ನಲ್ ರ‍್ಯಾಂಕ್ ಅಧಿಕಾರಿಯಾಗಿರುವ ಬಿ ಸಂತೋಷ್ ಬಾಬು ಹುತಾತ್ಮರಾಗಿದ್ದು, ಇವರು ತೆಲಂಗಾಣದ ಸೂರ್ಯಪೇಟೆ ಮೂಲದವರಾಗಿದ್ದಾರೆ.
ಮುಗಿಲು ಮುಟ್ಟಿದ ಪಳನಿ ಕುಟುಂಬಸ್ಥರ ಆಕ್ರಂದನ ಇನ್ನೊಂದೆಡೆ ತಮಿಳುನಾಡು ಮೂಲದ ಸೈನಿಕ ಪಳನಿ ಸಂಘರ್ಷದಲ್ಲಿ ಹುತಾತ್ಮನಾಗಿದ್ದಾರೆ. ಹುತಾತ್ಮ ಪಳನಿ, ರಾಮನಾಥಪುರಂ ಜಿಲ್ಲೆಯವರಾಗಿದ್ದು, ಕಳೆದ 22 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇವರ ಸಹೋದರ ಕೂಡ ಸೈನಿಕರಾಗಿದ್ದು, ರಾಜಸ್ಥಾನದಲ್ಲಿದ್ದಾರೆ. ಯೋಧನ ಸಾವಿನಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಗಡಿ ಸಂಘರ್ಷದಲ್ಲಿ ಯೋಧರು ಹುತಾತ್ಮ 1975ರ ನಂತರ ಭಾರತ-ಚೀನಾ ಗಡಿಯಲ್ಲಿ ಸಂಭವಿಸಿದ ಮೊದಲ ಹಿಂಸಾತ್ಮಕ ಘಟನೆ ಇದಾಗಿದೆ. ಕಳೆದ ಐದು ವಾರಗಳಿಂದ ಗಾಲ್ವಾನ್ ಕಣಿವೆಯಲ್ಲಿ ಉಭಯ ರಾಷ್ಟ್ರಗಳ ಸೈನಿಕರು ಕಣ್ಣಲ್ಲಿ ಕಣ್ಣಿಟ್ಟು ಗಡಿಯಲ್ಲಿ ಕರ್ತವ್ಯ ನಿರತರಾಗಿದ್ದರು. ಆದರೆ ನಿನ್ನೆ ರಾತ್ರಿ ನಡೆದ ಸಂಘರ್ಷದಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ.
ಎರಡೂ ದೇಶಗಳ ನಡುವೆ ಅನೇಕ ಹಂತಗಳ ಮಾತುಕತೆಯ ಬಳಿಕ ಗಡಿಭಾಗದಿಂದ ಒಂದೆರಡು ಕಿಲೋಮೀಟರ್ ಹಿಂದೆ ಬಂದಿರುವ ಉಭಯ ರಾಷ್ಟ್ರಗಳು ತಮ್ಮ ಸ್ಥಾನಗಳಿಂದ ಹಿಂದೆ ಸರಿದಿವೆ ಎಂದು ಸೇನಾ ಮೂಲಗಳು ತಿಳಿಸಿವೆ.