ಶ್ರೀನಗರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶಗಳಲ್ಲಿ ಪಾಕ್ ಉಪಟಳ ನಿಲ್ಲುವ ಸೂಚನೆ ಕಾಣುತ್ತಿಲ್ಲ. ಕಳೆದೆರಡು ದಿನಗಳಿಂದ ನಿರಂತರವಾಗಿ ಗುಂಡಿನ ಕಾಳಗ ನಡೆಯುತ್ತಿದೆ. ಪರಿಣಾಮ ಭಾರತೀಯ ಸೇನೆಯ ಯೋಧ ಲ್ಯಾನ್ಸ್ ನಾಯಕ ಸಂದೀಪ್ ಥಾಪಾ(35) ಹುತಾತ್ಮರಾಗಿದ್ದಾರೆ.
ಪಾಕ್ನಿಂದ ನಿಲ್ಲದ ಉಪಟಳ: ಗುಂಡಿನ ಚಕಮಕಿ ವೇಳೆ ಯೋಧ ಹುತಾತ್ಮ
ಭಾರತ-ಪಾಕ್ ಗಡಿ ನಿಯಂತ್ರಣ ರೇಖೆಯ ಬಳಿ ಪಾಕ್ ಸೇನೆ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ. ಇವತ್ತು ಉಭಯ ದೇಶಗಳ ಸೈನಿಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಯೋಧ ಹುತಾತ್ಮನಾಗಿದ್ದಾನೆ.
ಲ್ಯಾನ್ಸ್ ನಾಯಕ ಸಂದೀಪ್ ಥಾಪಾ
ಭಯೋತ್ಪಾದಕ ಶಿಬಿರಗಳ ಮೇಲೂ ಭಾರತೀಯ ಸೇನೆ ದಾಳಿ:
ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಕ್ಯಾಂಪ್ಗಳ ಮೇಲೂ ಭಾರತೀಯ ಸೇನೆ ಬಾಂಬ್ ದಾಳಿ ನಡೆಸಿದೆ. ಜೊತೆಗೆ ರಜೌರಿ ಪ್ರದೇಶದಲ್ಲಿನ ಉಗ್ರರ ಅನೇಕ ಅಡಗುದಾಣಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ವಿಧಿ 370 ರದ್ದು ವಿಚಾರ ಮುಂದಿಟ್ಟುಕೊಂಡಿರುವ ಪಾಕ್, ಅಂತಾರಾಷ್ಟ್ರೀಯ ಮಟ್ಟದಲ್ಲೂ ಮುಖಭಂಗಕ್ಕೊಳಗಾಗಿದೆ. ಈ ಬಳಿಕ ಗಡಿಯಲ್ಲಿ ಪಾಕ್ ಯೋಧರು ನಿರಂತರ ಗುಂಡಿನ ದಾಳಿ ನಡೆಸುತ್ತಿದ್ದಾರೆ.
Last Updated : Aug 17, 2019, 10:26 PM IST