ಲಡಾಖ್: ಪೂರ್ವ ಲಡಾಖ್ ಗಡಿಯಲ್ಲಿ ಕಪಟಿ ಚೀನಾ ತಂತ್ರಕ್ಕೆ ಪ್ರತಿತಂತ್ರ ನೀಡಲು ಭಾರತ ಸಿದ್ಧವಾಗಿದೆ. ಯಾವುದೇ ಪರಿಸ್ಥಿತಿಯಲ್ಲೂ ಎದುರಾಳಿಗಳಿಗೆ ತಕ್ಕ ಉತ್ತರ ನೀಡಲು ಭಾರತೀಯ ಸೇನೆ ಸನ್ನದ್ಧವಾಗಿದೆ.
ಲ್ಎಸಿಯಲ್ಲಿ ಟಿ-90 ಮತ್ತು ಟಿ-72 ಯುದ್ಧ ಟ್ಯಾಂಕ್ ಎಲ್ಎಸಿಯಲ್ಲಿ ಟಿ-90 ಮತ್ತು ಟಿ-72 ಯುದ್ಧ ಟ್ಯಾಂಕ್ಗಳನ್ನು ಭಾರತೀಯ ಸೇನೆ ಸನ್ನದ್ಧ ಸ್ಥಿತಿಯಲ್ಲಿಟ್ಟಿದೆ. ಹಗಲು, ರಾತ್ರಿ ಕಾರ್ಯಾಚರಿಸುವ ಮತ್ತು ಮೈನಸ್ 40 ಡಿಗ್ರಿಯಲ್ಲೂ ಸಮರ್ಥವಾಗಿ ಕಾರ್ಯನಿರ್ವಹಿಸುವ ಬಿಎಂಪಿ-2 ಕೋಂಬಾಟ್ ವೆಹಿಕಲ್ಗಳು ಶತ್ರು ಪಡೆಗಳ ಮೇಲೆ ನಿಗಾ ಇಟ್ಟಿವೆ. ಯಾಕೆಂದರೆ ಚೀನಾ ತನ್ನ ಕುತಂತ್ರ ಆರಂಭಿಸುವುದು ರಾತ್ರಿ ವೇಳೆಯಲ್ಲೇ. ಹೀಗಾಗಿ ಕಡಿದಾದ ಬೆಟ್ಟಗಳಲ್ಲಿ ನಡೆದುಕೊಂಡು ಹೋಗುವ ನಮ್ಮ ಯೋಧರಿಗೆ BMP-2 ಕೋಂಬಾಟ್ ವೆಹಿಕಲ್ಗಳೇ ಪ್ರಮುಖ ಆಧಾರ. ಈ ಕಾರಣಕ್ಕಾಗಿ ಭಾರತೀಯ ಸೇನೆ ಎಲ್ಎಸಿಯಲ್ಲಿ ಇವುಗಳನ್ನು ನಿಯೋಜಿಸಿದೆ.
ಲ್ಎಸಿಯಲ್ಲಿ ಟಿ-90 ಮತ್ತು ಟಿ-72 ಯುದ್ಧ ಟ್ಯಾಂಕ್ BMP-2 ಕೋಂಬಾಟ್ ವೆಹಿಕಲ್ಗಳನ್ನು 1985ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಳಿಸಲಾಗಿತ್ತು. ಪೂರ್ವ ಲಡಾಖ್ನ ಚುಮರ್-ಡೆಮ್ಚೋಕ್ ಪ್ರದೇಶದಲ್ಲಿ T-90 ಭೀಷ್ಮ ಟ್ಯಾಂಕ್ಗಳನ್ನು ನಿಯೋಜಿಸಲಾಗಿದೆ. T-90 ಸಮರ ಟ್ಯಾಂಕ್ಗಳನ್ನು ನಮ್ಮ ಯೋಧರು ಸಜ್ಜುಗೊಳಿಸುತ್ತಿರುವ ವಿಡಿಯೋವನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ. ರಷ್ಯಾ ನಿರ್ಮಿತ ಅತಿ ಸುಧಾರಿತ ಟ್ಯಾಂಕರ್ ಇದು. ಭೀಷ್ಮನ ಸದೃಢ ರಕ್ಷಾಕವಚ ಕ್ಷಿಪಣಿ ದಾಳಿಗೂ ಅಭೇದ್ಯ.
ಲ್ಎಸಿಯಲ್ಲಿ ಟಿ-90 ಮತ್ತು ಟಿ-72 ಯುದ್ಧ ಟ್ಯಾಂಕ್ 48 ಟನ್ ತೂಕದ ಭೀಷ್ಮ ಕಣಿವೆ-ಬೆಟ್ಟಗಳ ದಾರಿಯಲ್ಲಿ ಸಾಗಬಲ್ಲ ಬಲಶಾಲಿ. 9.63 ಮೀ. ಉದ್ದ, 3.73 ಮೀ. ಅಗಲ, 2.22 ಮೀ. ಎತ್ತರದ ದೈತ್ಯ. ಇನ್ವಾರ್ ಆ್ಯಂಟಿ ಟ್ಯಾಂಕರ್ ಕ್ಷಿಪಣಿ ಹಾರಿಸಬಲ್ಲ ಯುದ್ಧ ಪಟು. ಟಿ-90 ಭೀಷ್ಮ ಟ್ಯಾಂಕರ್‌ನ 12.8 ಎಂ.ಎಂ. ಮೆಷಿನ್ ಗನ್ನನ್ನು ರಿಮೋಟ್ ಮೂಲಕವೇ ಚಲಾಯಿಸಬಹುದಾಗಿದೆ. ಭೀಷ್ಮ 2001ರಿಂದ ನಮ್ಮ ಭೂಸೇನೆಗೆ ಬಲ ತುಂಬಿದ್ದಾನೆ.