ಲಖನೌ (ಉತ್ತರ ಪ್ರದೇಶ): ಭಾರತದ ಸೇನೆಯು ದೇಶದ ಸ್ಥೈರ್ಯವನ್ನು ಹೆಚ್ಚಿಸಿದೆ ಮತ್ತು ಚೀನಾದೊಂದಿಗಿನ ಗಡಿ ಸಂಘರ್ಷದ ಸಂದರ್ಭದಲ್ಲಿ ಹೆಮ್ಮೆ ತಂದಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಗಡಿ ಸಂಘರ್ಷದ ಸಮಯದಲ್ಲಿ ಸೇನೆ ರಾಷ್ಟ್ರದ ಸ್ಥೈರ್ಯ ಹೆಚ್ಚಿಸಿದೆ: ರಾಜನಾಥ್ ಸಿಂಗ್ - ಸೇನೆಯ ಧೈರ್ಯವನ್ನು ಕೊಂಡಾಡಿದ ರಾಜನಾಥ್ ಸಿಂಗ್
ಹೊಸ ಕಮಾಂಡ್ ಆಸ್ಪತ್ರೆಯ ಭೂಮಿಪೂಜೆ ಸಮಾರಂಭದಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೇನೆಯ ಧೈರ್ಯವನ್ನು ಕೊಂಡಾಡಿದ್ದಾರೆ.
rajnath
ಹೊಸ ಕಮಾಂಡ್ ಆಸ್ಪತ್ರೆಯ ಭೂಮಿಪೂಜೆ ಸಮಾರಂಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಂಗ್, "ಭಾರತ-ಚೀನಾ ಸಂಘರ್ಷ ಸಮಯದಲ್ಲಿ ಸೈನ್ಯದ ಕಾರ್ಯ ದೇಶದ ಸ್ಥೈರ್ಯವನ್ನು ಹೆಚ್ಚಿಸಿದೆ ಮತ್ತು ನಾಗರಿಕರು ತಲೆಯೆತ್ತಿ ನಿಲ್ಲಲು ಸಹಕಾರಿಯಾಗಿದೆ" ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು.