ನವದೆಹಲಿ:ರಾಷ್ಟ್ರೀಯ ಭದ್ರತೆ ಮತ್ತು ಬಳಕೆದಾರರ ಸುರಕ್ಷತೆ ದೃಷ್ಠಿಯಿಂದ ಕಳೆದ ಕೆಲ ದಿನಗಳ ಹಿಂದೆ ಚೀನಾದ 59 ಆ್ಯಪ್ ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಹಾಕಿದ್ದು, ಇದರ ಬೆನ್ನಲ್ಲೇ ಇದೀಗ ಮತ್ತೊಂದು ನಿರ್ಧಾರ ಕೈಗೊಂಡಿದೆ.
ಫೇಸ್ಬುಕ್, ಪಬ್ಜಿ ಸೇರಿ 89 ಆ್ಯಪ್ ಡಿಲೀಟ್ ಮಾಡಲು ಭಾರತೀಯ ಸೈನಿಕರಿಗೆ ಸೂಚನೆ! - ಇಂಡಿಯನ್ ಆರ್ಮಿ
ದೇಶದ ಭದ್ರತೆ ದೃಷ್ಠಿಯಿಂದ ಇದೀಗ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಭಾರತೀಯ ಯೋಧರು ಮೊಬೈಲ್ನಲ್ಲಿ ಬಳಕೆ ಮಾಡ್ತಿದ್ದ 89 ಆ್ಯಪ್ ಡಿಲೀಟ್ ಮಾಡುವಂತೆ ಸೂಚನೆ ನೀಡಿದೆ.
ಭಾರತೀಯ ಸೇನೆ ಬಳಕೆ ಮಾಡುತ್ತಿರುವ ಫೇಸ್ಬುಕ್, ಟಿಕ್ಟಾಕ್, ಇನ್ಸ್ಟಾಗ್ರಾಮ್,ಪಬ್ ಜಿ,ನ್ಯೂಸ್ ಆ್ಯಪ್ ಡೈಲಿ ಹಂಟ್ ಸೇರಿದಂತೆ 89 ಆ್ಯಪ್ ತಮ್ಮ ಮೊಬೈಲ್ಗಳಿಂದ ಡಿಲೀಟ್ ಮಾಡುವಂತೆ ಸೂಚನೆ ನೀಡಲಾಗಿದೆ. ಜತೆಗೆ ಎಲ್ಲ ಖಾಸಗಿ ಬ್ಲಾಗ್ ಮೊಬೈಲ್ನಿಂದ ಡಿಲೀಟ್ ಮಾಡಲು ಆದೇಶ ಹೊರಡಿಸಲಾಗಿದೆ.
ಯಾವುದೇ ರೀತಿಯಲ್ಲಿ ಮಾಹಿತಿ ಸೋರಿಕೆಯಾಗುವುದನ್ನ ತಡೆಗಟ್ಟುವ ನಿಟ್ಟಿನಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಸೈನಿಕರು ಫೇಸ್ಬುಕ್ನಲ್ಲಿ ಸಮವಸ್ತ್ರದಲ್ಲಿ ಚಿತ್ರ ಪೋಸ್ಟ್ ಮಾಡುತ್ತಿದ್ದರು. ಇದರಿಂದ ಅವರು ಇರುವ ಸ್ಥಳ ಬಹಿರಂಗಗೊಳ್ಳುತ್ತಿದ್ದ ಕಾರಣ ಇದೀಗ ಅದಕ್ಕೂ ಬ್ರೇಕ್ ಹಾಕಲಾಗಿದೆ.