ನವದೆಹಲಿ:ಕಳೆದ ಕೆಲ ದಿನಗಳಿಂದ ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಉಗ್ರರ ದಾಳಿ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದರ ಬೆನ್ನಲ್ಲೇ ಭಾರತೀಯ ಯೋಧರು ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಅಲ್ಲಿನ ಉಗ್ರತಾಣಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂಬ ಪಾಕ್ ವರದಿಗೆ ಭಾರತ ತಿರುಗೇಟು ನೀಡಿದೆ. ಪಾಕ್ ಮಾಧ್ಯಮಗಳಲ್ಲಿ ಬಿತ್ತರಗೊಂಡ ಮಾಹಿತಿ ಪ್ರಕಾರ, ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಭಾರತ ಮತ್ತೊಂದು ದಾಳಿ ನಡೆಸಿದ್ದು, ಅನೇಕರ ಸಾವಿಗೆ ಕಾರಣವಾಗಿದೆ ಎಂದು ತಿಳಿಸಿತ್ತು.
ಭಾರತೀಯ ಸೇನೆ ಹೇಳಿದ್ದೇನು?
ಗಡಿ ನಿಯಂತ್ರಣ ರೇಖೆಯ ಮೂಲಕವಾಗಿ ನಿರಂತರವಾಗಿ ಉಗ್ರರನ್ನು ರವಾನಿಸುವ ಕೆಲಸ ಆಗುತ್ತಿದೆ. ಇದರ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಉಗ್ರರ ಒಳನುಸುಳುವಿಕೆ ಕಂಡುಬಂದಾಗ ದಾಳಿ ನಡೆಸುವುದು ನಮ್ಮ ಹಕ್ಕು ಎಂದು ಪಾಕ್ ಸೇನಾಧಿಕಾರಿಗಳ ಜತೆಗಿನ ಮಾತುಕತೆಯಲ್ಲೇ ನಾವು ಸ್ಪಷ್ಟಪಡಿಸಿದ್ದೇವೆ ಎಂದು ಭಾರತೀಯ ಸೇನೆ ಪ್ರಕಟಣೆಯಲ್ಲಿ ಸ್ಷಪ್ಟಪಡಿಸಿದೆ.
ಪಾಕ್ ಮಾಧ್ಯಮಗಳಲ್ಲಿ ದಾಳಿಯ ಸುದ್ದಿ, ಸೇನೆಯಿಂದ ಟ್ವೀಟ್:
ಪಾಕ್ ಸುದ್ದಿ ಮಾಧ್ಯಮಗಳಲ್ಲಿ ಭಾರತೀಯ ಸೇನಾ ದಾಳಿ ಬಗ್ಗೆ ವರದಿ ಬಿತ್ತರಗೊಂಡಿದೆ. ಈ ಮಧ್ಯೆ ಪಾಕಿಸ್ತಾನದ ಆರ್ಮಿ ಫೋರ್ಸ್ನ ವಕ್ತಾರ ಮೇಜರ್ ಜನರಲ್ ಆಸೀಫ್ ಗಪೂರ್ ಕೂಡ ಈ ಮಾಹಿತಿಯನ್ನು ಖಚಿತಪಡಿಸಿ, ತಮ್ಮ ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದಾರೆ.ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಯೋಧರು ದಾಳಿ ನಡೆಸಿದ್ದಾರೆ ಎಂದು ಎಂದು ತಿಳಿದುಬಂದಿದೆ. ಕ್ಲಸ್ಟರ್ ಬಾಂಬ್‌ಗಳ ಮೂಲಕ ದಾಳಿ ನಡೆಸಲಾಗಿದೆ ಎಂದು ಪಾಕಿಸ್ತಾನದ ಮಾಧ್ಯಮ ಡಾನ್ ವರದಿ ಮಾಡಿದೆ. ಜುಲೈ 30 ಹಾಗೂ 31ರ ವೇಳೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಪಾಕ್ ಮಾಧ್ಯಮಗಳಲ್ಲಿ ವರದಿ ಬಿತ್ತರಗೊಂಡಿತ್ತು.