ನವದೆಹಲಿ: ಭಾರತೀಯ ಸೇನಾ ದಿನ ಪ್ರಯುಕ್ತ ಸೇನಾ ಸಿಬ್ಬಂದಿಗೆ ಶುಭ ಕೋರಿರುವ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್, ಯೋಧರೊಂದಿಗಿರುವ ಫೋಟೋ ಒಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಸೈನಿಕರನ್ನ ಸ್ಮರಿಸಿದ್ದಾರೆ.
ಸೇನಾ ದಿನದ ಶುಭ ಕೋರಿದ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್..
ಇಂದಿನ ಸೇನಾ ದಿನದಂದು ನಾನು ಎಲ್ಲಾ ಧೀರ ಭಾರತೀಯ ಸೇನಾ ಸಿಬ್ಬಂದಿಗೆ ನಮಸ್ಕರಿಸುತ್ತೇನೆ. ಭಾರತವನ್ನು ಒಂದು ಸುರಕ್ಷಿತ ಸ್ಥಳವನ್ನಾಗಿ ಮಾಡವಲ್ಲಿ ಅವರ ಅದಮ್ಯ ಮನೋಭಾವ, ಶೌರ್ಯ ಮತ್ತು ತ್ಯಾಗಗಳನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತೇನೆ ಎಂದು ಭಾರತೀಯ ಸೇನಾ ದಿನ ಪ್ರಯುಕ್ತ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಇಂದಿನ ಸೇನಾ ದಿನದಂದು ನಾನು ಎಲ್ಲಾ ಧೀರ ಭಾರತೀಯ ಸೇನಾ ಸಿಬ್ಬಂದಿಗೆ ನಮಸ್ಕರಿಸುತ್ತೇನೆ. ಭಾರತವನ್ನು ಒಂದು ಸುರಕ್ಷಿತ ಸ್ಥಳವನ್ನಾಗಿ ಮಾಡುವಲ್ಲಿ ಅವರ ಅದಮ್ಯ ಮನೋಭಾವ, ಶೌರ್ಯ ಮತ್ತು ತ್ಯಾಗಗಳನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತೇನೆ ಎಂದು ರಾಜ್‌ನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುಂಚೆ ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾನೆ ಸೇನಾ ದಿನಾಚರಣೆ ಪ್ರಯಕ್ತ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಗೌರವ ಸಲ್ಲಿಸಿದರು. ಸಿಡಿಎಸ್ ಮತ್ತು ಸೇನಾ ಮುಖ್ಯಸ್ಥರೊಂದಿಗೆ ಏರ್ ಚೀಫ್ ಮಾರ್ಷಲ್ ಆರ್ಕೆಎಸ್ ಭದೌರಿಯಾ ಮತ್ತು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಗೌರವ ಸಲ್ಲಿಸಿದರು.