ನವದೆಹಲಿ:ಇಂದಿನ ದಿನಗಳಲ್ಲಿ ಜಗತ್ತು ಹವಾಮಾನ ಬದಲಾವಣೆ ದುಷ್ಪರಿಣಾಮ ಅನುಭವಿಸುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತೀಯ ಸೇನೆಯು ಕಳೆದ 19 ತಿಂಗಳಿಂದ ಕಾಶ್ಮೀರದ ಸಿಯಾಚಿನ್ ಹಿಮನದಿ ಭಾಗದಲ್ಲಿ ಸುಮಾರು 130.14 ಟನ್ಗಳಷ್ಟು ತ್ಯಾಜ್ಯವನ್ನು ಸ್ವಚ್ಛಗೊಳಿಸಿದೆ.
ಸಿಯಾಚಿನ್ ಸ್ವಚ್ಛ ಅಭಿಯಾನದಡಿ ಸೇನೆ ಕಳೆದ 2018ರ ಜನವರಿಯಿಂದ ಈ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. 130.14 ಟನ್‌ಗಳಲ್ಲಿ 48.14 ಟನ್ ಜೈವಿಕ ವಿಘಟನೆ ಆಗಿದ್ದರೆ, 40 ಟನ್‌ಗಳಲ್ಲಿ ಪ್ಲಾಸ್ಟಿಕ್ ಮತ್ತು ಗಾಜಿನ ತ್ಯಾಜ್ಯ ಸೇರಿವೆ. ಯುದ್ಧ ಸಾಮಗ್ರಿಗಳ ಚಿಪ್ಪುಗಳು ಸೇರಿದಂತೆ ಲೋಹಿಯ ಅಂಶಯುಕ್ತ ತ್ಯಾಜ್ಯ ಸುಮಾರು 41.45 ಟನ್ಗಳಷ್ಟಿದೆ.