ಕರ್ನಾಟಕ

karnataka

ETV Bharat / bharat

ಸೇನೆ, ಪೊಲೀಸರ ಜಂಟಿ ಕಾರ್ಯಾಚರಣೆ:  ಎನ್‌ಎಸ್‌ಸಿಎನ್​​​ನ ಇಬ್ಬರು ಕಾರ್ಯಕರ್ತರ ಬಂಧನ

ಎನ್‌ಎಸ್‌ಸಿಎನ್ (ಐಎಂ) ಕಾರ್ಯಕರ್ತರನ್ನು ಭಾನುವಾರ ಬಂಧಿಸಲಾಗಿದೆ. ಬಂಧಿತ ಕಾರ್ಯಕರ್ತರನ್ನು ಎಸ್‌ಎಸ್ ಲೆಫ್ಟಿನೆಂಟ್ ಕರ್ನಲ್ ರಾಂಪಾಂಗ್ ಹಖುನ್ ಜಾನಿ ಮತ್ತು ಎಸ್‌ಎಸ್ ಸಾರ್ಜೆಂಟ್ ಕೊಚುಂಗ್ ಸಾಂಕಿ ಎಂದು ಗುರುತಿಸಲಾಗಿದೆ.

ಎನ್‌ಎಸ್‌ಸಿಎನ್ ಕಾರ್ಯಕರ್ತರ ಬಂಧನ
ಎನ್‌ಎಸ್‌ಸಿಎನ್ ಕಾರ್ಯಕರ್ತರ ಬಂಧನ

By

Published : Jun 16, 2020, 7:29 AM IST

ಟಿನ್ಸುಕಿಯಾ (ಅಸ್ಸೋಂ):ಅಸ್ಸೋಂ ಪೊಲೀಸರು ಮತ್ತು ಭಾರತೀಯ ಸೇನೆ ಜಂಟಿ ಕಾರ್ಯಾಚರಣೆ ನಡೆಸಿ, ಟಿನ್ಸುಕಿಯಾ ಜಿಲ್ಲೆಯ ಲೆಡೋ ಪ್ರದೇಶದ ಬಳಿ ಎನ್‌ಎಸ್‌ಸಿಎನ್ (ಐಎಂ) ಎಂದೂ ಕರೆಯಲ್ಪಡುವ ನಾಗಾಲ್ಯಾಂಡ್‌ನ ರಾಷ್ಟ್ರೀಯ ಸಮಾಜವಾದಿ ಮಂಡಳಿಯ (ಇಸಾಕ್ ಮುಯಿವಾ) ಇಬ್ಬರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಎನ್‌ಎಸ್‌ಸಿಎನ್ (ಐಎಂ) ಕಾರ್ಯಕರ್ತರನ್ನು ಭಾನುವಾರ ಬಂಧಿಸಲಾಗಿದೆ. ಬಂಧಿತ ಕಾರ್ಯಕರ್ತರನ್ನು ಎಸ್‌ಎಸ್ ಲೆಫ್ಟಿನೆಂಟ್ ಕರ್ನಲ್ ರಾಂಪಾಂಗ್ ಹಖುನ್ ಜಾನಿ ಮತ್ತು ಎಸ್‌ಎಸ್ ಸಾರ್ಜೆಂಟ್ ಕೊಚುಂಗ್ ಸಾಂಕಿ ಎಂದು ಗುರುತಿಸಲಾಗಿದೆ.

ಓದಿ:ಪಾಕ್​ನಲ್ಲಿ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳ ಬಂಧನಕ್ಕೆ ತೀವ್ರ ವಿರೋಧ

ನಿರ್ದಿಷ್ಟ ಮಾಹಿತಿ ಆಧರಿಸಿ ಜಂಟಿ ತಂಡವು ಕಾರ್ಯಾಚರಣೆ ಮಾಡಿ ಕಾರ್ಯಕರ್ತರನ್ನು ಬಂಧಿಸಿದೆ. ಅಸ್ಸೋಂನಲ್ಲಿ ಈ ವ್ಯಕ್ತಿಗಳು ವಿಧ್ವಂಸಕ ಕೃತ್ಯಗಳು ಹಾಗೂ ಸುಲಿಗೆ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎಂದು ಶಂಕಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಬಂಧಿತ ವ್ಯಕ್ತಿಗಳಿಂದ ವಿದೇಶಿ ನಿರ್ಮಿತ 9 ಎಂಎಂ ಪಿಸ್ತೂಲ್, ಒಂದು ಪಾಯಿಂಟ್ 22 ಪಿಸ್ತೂಲ್, 10 ಲೈವ್ ರೌಂಡ್ ಮದ್ದುಗುಂಡುಗಳನ್ನು ಮತ್ತು 10,000 ರೂ. ವಶಪಡಿಸಿಕೊಂಡಿದ್ದು, ಹೆಚ್ಚಿನ ತನಿಖೆಗಾಗಿ ಲೆಡೋ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

.

ABOUT THE AUTHOR

...view details