ನವದೆಹಲಿ:ಅರ್ಥಶಾಸ್ತ್ರ ವಿಭಾಗದಲ್ಲೂ ಪ್ರಸಕ್ತ ವರ್ಷದ ನೊಬೆಲ್ ಪ್ರಶಸ್ತಿ ಪ್ರಕಟಗೊಂಡಿದ್ದು, ಭಾರತ-ಅಮೆರಿಕ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿಗೆ ಈ ಗೌರವ ಒಲಿದು ಬಂದಿದೆ.
ಬಡತನ ನಿರ್ಮೂಲನೆಗೆ ಪಣ: ಭಾರತ ಮೂಲದ ಬ್ಯಾನರ್ಜಿಗೆ ಅರ್ಥಶಾಸ್ತ್ರದಲ್ಲಿ ನೊಬೆಲ್! - ಅರ್ಥಶಾಸ್ತ್ರಜ್ಞ ಅಭಿಜಿತ್
ಅರ್ಥಶಾಸ್ತ್ರ ವಿಭಾಗದಲ್ಲಿ ಪ್ರಸಕ್ತ ಸಾಲಿನ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದ್ದು, ಭಾರತ ಮೂಲದ ವಿಜ್ಞಾನಿವೋರ್ವರಿಗೆ ಈ ಗೌರವ ಒಲಿದು ಬಂದಿದೆ.
ಇವರ ಜತೆಗೆ ಎಸ್ತರ್ ಡಪ್ಲೋ ಹಾಗೂ ಮಿಶೆಲ್ ಕ್ರೀಮರ್ ಅವರಿಗೆ ಈ ಸಾಲಿನ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ಒಲಿದು ಬಂದಿದೆ. ಜಾಗತಿಕ ಮಟ್ಟದಲ್ಲಿ ಬಡತನ ನಿರ್ಮೂಲನೆಗಾಗಿ ಇವರು ಕೈಗೊಂಡ ಕ್ರಮಗಳಿಂದಾಗಿ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಅಭಿಜಿತ್ ವಿನಾಯಕ್ ಬ್ಯಾನರ್ಜಿ ಹುಟ್ಟಿದ್ದು ಕೋಲ್ಕತ್ತಾದಲ್ಲಿ, ಸದ್ಯ ಎಂಐಟಿಯಲ್ಲಿ ಫೋರ್ಡ್ ಪೌಂಡೇಶನ್ ಇಂಟರ್ನ್ಯಾಷನಲ್ ಅರ್ಥಶಾಸ್ತ್ರಜ್ಞ ವಿಭಾಗದ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೋಲ್ಕತ್ತಾದಲ್ಲಿದ್ದಾಗ ಬ್ಯಾನರ್ಜಿ ಸೌತ್ ಪಾಯಿಂಟ್ ಸ್ಕೂಲ್ ಮತ್ತು ಪ್ರೆಸಿಡೆನ್ಸಿ ಕಾಲೇಜ್ನಲ್ಲಿ ವ್ಯಾಸಂಗ ಮಾಡಿದ್ದರು. ಇದಾದ ಬಳಿಕ ಅರ್ಥಶಾಸ್ತ್ರದಲ್ಲಿ 1981ರಲ್ಲಿ ಪದವಿ ಪಡೆದುಕೊಂಡಿದ್ದರು. 1983ರಲ್ಲಿ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಎಂಎ ವ್ಯಾಸಂಗ ಬಹಾಗೂ 1988ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.