ನವದೆಹಲಿ: ನಾಪತ್ತೆಯಾಗಿರುವ ಭಾರತೀಯ ವಾಯುಪಡೆಯ AN-32 ವಿಮಾನಕ್ಕಾಗಿ ರಾತ್ರಿಯಿಡೀ ಹುಡುಕಾಟ ನಡೆಸಿದರೂ ಈವರೆಗೆ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಅಸ್ಸೋಂನ ಜೊಹ್ರಾತ್ನಿಂದ ಟೇಕ್ಆಫ್ ಆಗಿದ್ದ AN-32 ವಿಮಾನ ನಿನ್ನೆ ನಾಪತ್ತೆಯಾಗಿತ್ತು. ಸುಖೊಯ್-30 ವಿಮಾನ ಹಾಗೂ C-130 ವಿಶೇಷ ಕಾರ್ಯಾಚರಣೆ ವಿಮಾನ ಸೇರಿ ಹಲವಾರು ವಿಮಾನಗಳು, ಭಾರತೀಯ ಸೇನೆ, ಐಟಿಬಿಪಿ ಹುಡುಕಾಟ ನಡೆಸುತ್ತಿವೆ. ರಾತ್ರಿಯಿಡೀ ಹುಡುಕಾಟ ನಡೆಸಿದರೂ ವಿಮಾನ ಪತ್ತೆಯಾಗಿಲ್ಲದ ಕಾರಣ ಶೋಧ ಕಾರ್ಯ ಮುಂದುವರೆದಿದೆ.
ಮಧ್ಯಾಹ್ನ 12:25 ಅಸ್ಸೋನಿಂದ ಹೊರಟ ವಿಮಾನದಲ್ಲಿ 15 ಮಂದಿ ವಾಯುಪಡೆಯ ಸಿಬ್ಬಂದಿ ಇದ್ದರು. ಈ ವಿಮಾನ ಅರುಣಾಚಲ ಪ್ರದೇಶದ ಮೆಂಚುಕದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಮಧ್ಯಾಹ್ನ 1 ಗಂಟೆಗೆ ಸಂಪರ್ಕ ಕಡಿದುಕೊಂಡಿತ್ತು.