ನವದೆಹಲಿ:ಅತಿ ದೂರದ, ಜನಸಂಪರ್ಕ ಸಾಧ್ಯವಾಗದ ಪ್ರದೇಶಗಳಲ್ಲಿ ಕೊರೊನಾ ವೈರಸ್ನಂತಹ ಸಾಂಕ್ರಾಮಿಕ ರೋಗಗಳಿಗೆ ತುತ್ತಾದವರು ಇದ್ದರೆ ಅಂತವರನ್ನು ಸ್ಥಳಾಂತರಕ್ಕೆ ಭಾರತೀಯ ವಾಯುಪಡೆಯು 'ಅರ್ಪಿತ್' (Airborne Rescue Pod for Isolated Transportation) ಎಂಬ ಪಾಡ್ ಸಿದ್ಧಪಡಿಸಿದೆ.
'ಅರ್ಪಿತ್'ನ್ನು ವಾಯುಪಡೆಯು ದೇಶೀಯವಾಗಿ ವಿನ್ಯಾಸಗೊಳಿಸಿದ್ದು, ಅದನ್ನು ವಿಮಾನ ಹಾಗೂ ಹೆಲಿಕಾಪ್ಟರ್‌ನಲ್ಲಿ ಪ್ರತ್ಯೇಕವಾಗಿ ಅಳವಡಿಕೆ ಮಾಡಬಹುದಾಗಿದೆ. ಕೊರೊನಾದಂತಹ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯುವಲ್ಲಿ ಅರ್ಪಿತ್ ಬಹಳ ಸಹಕಾರಿಯಾಗಲಿದೆ. ವಾಯುಯಾನ ಪ್ರಮಾಣೀಕೃತ ವಸ್ತುವಿನಿಂದ ಸಿದ್ಧಗೊಂಡ ಹಗುರವಾದ ಐಸೋಲೇಸನ್ ವ್ಯವಸ್ಥೆಯನ್ನು ಹೊಂದಿದ್ದು, ಸದ್ಯ ಇರುವುದಕ್ಕಿಂತ ಹೆಚ್ಚು ವಿಶಾಲವಾಗಿ ಹಾಗೂ ರೋಗಿಗಳ ಗೋಚರತೆಗಾಗಿ ಪಾರದರ್ಶಕತೆ ಇರುವಂತೆ ಅರ್ಪಿತ್ ರೂಪುಗೊಂಡಿದೆ.