ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಆರಂಭಿಸಿರುವ 'ಮೈ ಭೀ ಚೌಕಿದಾರ್' ಚುನಾವಣೆ ಅಭಿಯಾನದ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ. ಭಾರತಕ್ಕೆ ಬೇಕಾಗಿರುವುದು ಓರ್ವ ಪ್ರಾಮಾಣಿಕ ಪ್ರಧಾನಿ ಹೊರತು ಚೌಕಿದಾರ್ ಅಲ್ಲವೆಂದು ತಿರುಗೇಟು ನೀಡಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಾರ್ಟಿ, ಮುಂಬರುವ ಲೋಕಸಭೆ ಚುನಾವಣೆಗಾಗಿ 'ಮೈ ಭೀ ಚೌಕಿದಾರ್' ಎಂಬ ಅಭಿಯಾನ ಆರಂಭಿಸಿದೆ. ಅದಕ್ಕೆ ಈಗಾಗಲೇ ಪ್ರತಿಪಕ್ಷಗಳ ಮುಖಂಡರು ವಾಗ್ದಾಳಿ ನಡೆಸಿದ್ದು, ಓವೈಸಿ ಕೂಡ ಅದೇ ಹಾದಿ ತುಳಿದಿದ್ದಾರೆ.