ರಾಂಚಿ:ಏಕದಿನ, ಟಿ-20 ಕ್ರಿಕೆಟ್ ಸರಣಿ ಶುರುವಾದ ಮೇಲೆ ಟೆಸ್ಟ್ ಕ್ರಿಕೆಟ್ ನೋಡುವ ಕ್ರೀಡಾಭಿಮಾನಿಗಳ ಆಸಕ್ತಿ ಮತ್ತಷ್ಟು ಕಡಿಮೆಯಾಗಿದ್ದು, ಐಸಿಸಿ ಅದಕ್ಕಾಗಿ ಹೊಸ ಹೊಸ ಪ್ಲಾನ್ ರೂಪಿಸುತ್ತಿದ್ದರೂ ಪ್ರಯೋಜನಕ್ಕೆ ಬರುತ್ತಿಲ್ಲ.
ಟೆಸ್ಟ್ ಕ್ರಿಕೆಟ್ನಲ್ಲೂ ಮಹತ್ವದ ಬದಲಾವಣೆ ತರಲು ಮುಂದಾಗಿರುವ ಐಸಿಸಿ, ವಿಶ್ವ ಚಾಂಪಿಯನ್ ಟೆಸ್ಟ್ ಟೂರ್ನಿ ಆಯೋಜನೆ ಮಾಡಿದೆ. ಇಷ್ಟಾದ್ರೂ ಕ್ರೀಡಾಭಿಮಾನಿಗಳಲ್ಲಿ ಅದರ ಬಗ್ಗೆ ಹೆಚ್ಚಿನ ಆಸಕ್ತಿ ಇಲ್ಲದಂತಾಗಿದೆ. ನಾಳೆಯಿಂದ ಜಾರ್ಖಂಡ್ನ ರಾಂಚಿಯಲ್ಲಿ ನಡೆಯಲಿರುವ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಕೊನೆ ಟೆಸ್ಟ್ ಪಂದ್ಯ ನೋಡಲು ಕ್ರೀಡಾಭಿಮಾನಿಗಳು ಹೆಚ್ಚಿನ ಪ್ರಮಾಣದಲ್ಲಿ ಟಿಕೆಟ್ ಖರೀದಿ ಮಾಡದಿರುವುದೇ ಅದಕ್ಕೆ ಕಾರಣವಾಗಿದೆ.