ಸ್ಕೈ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ- ನ್ಯೂಜಿಲ್ಯಾಂಡ್ ನಡುವಣ ನಾಲ್ಕನೇ ಟಿ-20 ಪಂದ್ಯವೂ ಟೈ ಆಗಿದೆ. ಭಾರತ 20 ಓವರ್ನಲ್ಲಿ 165 ರನ್ ಗಳಿಸಿದರೆ, ನ್ಯೂಜಿಲ್ಯಾಂಡ್ ಕೂಡ 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 165 ರನ್ ಕಲೆಹಾಕಿದೆ.
ನಾಲ್ಕನೇ ಟಿ-20 ಪಂದ್ಯವೂ ಡ್ರಾ... ಸೂಪರ್ ಓವರ್ನಲ್ಲಿ ಯಾರಿಗೆ ಗೆಲುವು!?
ಸತತ ಮೂರು ಟಿ-20 ಪಂದ್ಯಗಳಲ್ಲಿ ಸೋತು ಸುಣ್ಣವಾಗಿದ್ದ ನ್ಯೂಜಿಲೆಂಡ್ ಪಡೆ ನಾಲ್ಕನೇ ಪಂದ್ಯದಲ್ಲಿ ಗೆಲುವಿನ ನಗೆ ಕಾಣುವ ಉತ್ಸಾಹದಲ್ಲಿ ಎಡವಿದ್ದು, ಇದೀಗ ಸೂಪರ್ ಓವರ್ ನಡೆಯಬೇಕಾದ ಅನಿವಾರ್ಯತೆ ಎದುರಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಕೆಲವೊಂದು ಬದಲಾವಣೆಗಳೊಂದಿಗೆ ಕಣಕ್ಕಿಳಿದಿತ್ತು. ಹಿಟ್ಮ್ಯಾನ್ ರೋಹಿತ್ ಶರ್ಮಾ ಸ್ಥಾನದಲ್ಲಿ ಅವಕಾಶ ಪಡೆದ ಸಂಜು ಸ್ಯಾಮ್ಸನ್ ಕೇವಲ 8ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ರು. ಇದಾದ ಬಳಿಕ ಬಂದ ಕ್ಯಾಪ್ಟನ್ ಕೊಹ್ಲಿ ಕೂಡ 11ರನ್, ಅಯ್ಯರ್ 1ರನ್, ಶಿವಂ ದುಬೆ 12ರನ್ಗಳಿಸಿ ವಿಕೆಟ್ ಒಪ್ಪಿಸಿದರು. 10 ಓವರ್ಗಳಲ್ಲಿ 6ವಿಕೆಟ್ ಕಳೆದುಕೊಂಡು 88ರನ್ಗಳಿಸಿದ್ದ ವೇಳೆ 39ರನ್ಗಳಿಕೆ ಮಾಡಿದ್ದ ರಾಹುಲ್ ಕೂಡ ವಿಕೆಟ್ ಒಪ್ಪಿಸಿದರು. ತಂಡಕ್ಕೆ ಮನೀಷ್ ಪಾಂಡೆ ಹಾಗೂ ಶಾರ್ದೂಲ್ ಠಾಕೂರ್ ತಂಡಕ್ಕೆ ಆಸರೆಯಾದರು. ಈ ಜೋಡಿ ತಂಡದ ಮೊತ್ತ 130ರ ಗಡಿ ದಾಟುವಂತೆ ಮಾಡಿದರು. ಕೊನೆಯದಾಗಿ ತಂಡ 165ರನ್ಗಳಿಕೆ ಮಾಡಿದ್ದು, ನ್ಯೂಜಿಲ್ಯಾಂಡ್ಗೆ 166ರನ್ ಟಾರ್ಗೆಟ್ ನೀಡ್ತು.
ನ್ಯೂಜಿಲ್ಯಾಂಡ್ ಕೂಡ 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 165 ರನ್ ಕಲೆಹಾಕಿದೆ.ಅಂತಿಮ ಹಂತದಲ್ಲಿ ಅರ್ಧಶತಕ ಸಿಡಿಸಿದ್ದ ಸೀಫರ್ಟ್ ಕೂಡ ಔಟ್ ಆಗುವ ಮೂಲಕ ಕಿವೀಸ್ಗೆ ಆಘಾತ ನೀಡಿದರು. ಕೊನೆಯ ಎಸೆತದಲ್ಲಿ ನ್ಯೂಜಿಲ್ಯಾಂಡ್ ಗೆಲುವಿಗೆ 2 ರನ್ಗಳ ಅವಶ್ಯಕತೆಯಿತ್ತು. ಆದರೆ, ಒಂದೇ ರನ್ಗಳಿಕೆ ಮಾಡಿದ್ದರಿಂದ ಪಂದ್ಯ ಡ್ರಾ ಆಗಿದೆ.