ಕೋಲ್ಕತ್ತಾ:ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್ ಪಂದ್ಯದ ವೇಳೆ ಬಾಂಗ್ಲಾದೇಶದ ಇಬ್ಬರು ಪ್ಲೇಯರ್ ಟೀಂ ಇಂಡಿಯಾ ಬೌನ್ಸರ್ ದಾಳಿಗೆ ಬಲಿಯಾಗಿದ್ದು, ಇದೀಗ ಅವರು ಸಿಟಿ ಹಾಗೂ ಎಆರ್ಐ ಸ್ಕ್ಯಾನ್ಗೆ ಒಳಗಾಗಿದ್ದಾರೆ.
ಬೌನ್ಸರ್ ಪೆಟ್ಟು ತಿಂದ ಬಾಂಗ್ಲಾ ಪ್ಲೇಯರ್ಸ್ ಲಿಟನ್ ದಾಸ್,ನಯೀಮ್ಗೆ CT,MRI ಸ್ಕ್ಯಾನ್! - ಬೌನ್ಸರ್ ಲಿಟನ್
ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ ವೇಳೆ ಮೊಹಮ್ಮದ್ ಶಮಿ ಎಸೆದ ಬೌನ್ಸರ್ ಪೆಟ್ಟು ತಿಂದು ಗಾಯಗೊಂಡಿದ್ದ ಇಬ್ಬರು ಬ್ಯಾಟ್ಸ್ಮನ್ಗಳು ಇದೀಗ ಸಿಟಿ ಹಾಗೂ ಎಂಆರ್ಐ ಸ್ಕ್ಯಾನ್ಗೆ ಒಳಗಾಗಿದ್ದಾರೆ.
ಟೀಂ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ ಎಸೆದ ಓವರ್ನಲ್ಲೇ ಬಾಂಗ್ಲಾ ಆಟಗಾರರಾದ ಲಿಟನ್ ದಾಸ್ ಹಾಗೂ ನಯೀಮ್ ಹಸನ್ ಹೆಲ್ಮೆಟ್ಗೆ ಬಾಲ್ ತಗುಲಿದ ಕಾರಣ ಇಬ್ಬರು ಬೇಗನೇ ಮೈದಾನ ಸೇರಿಕೊಂಡಿದ್ದರು. ಇದೀಗ ಲಿಟನ್ ದಾಸ್ಗೆ ಸಿಟಿ ಸ್ಕ್ಯಾನ್ ಹಾಗೂ ನಯೀಮ್ಗೆ ಎಂಆರ್ಐ ಸ್ಕ್ಯಾನ್ ಮಾಡಲಾಗಿದೆ.
ಇದರ ಮಧ್ಯೆ ಇಬ್ಬರು ಆಟಗಾರರನ್ನ ಬಾಂಗ್ಲಾ ಪ್ರಧಾನಿ ಶೇಖ್ ಹಸೀನ್ ಭೇಟಿಯಾಗಿ ಅವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು.ಈಡನ್ ಗಾರ್ಡನ್ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಹೊನಲು ಬೆಳಕಿನ ಕ್ರಿಕೆಟ್ ಆಡುತ್ತಿದ್ದು, ಟೀಂ ಇಂಡಿಯಾ ದಾಳಿಗೆ ಬಾಂಗ್ಲಾ ತತ್ತರಿಸಿದೆ.