ಕರ್ನಾಟಕ

karnataka

ETV Bharat / bharat

ನಾಳೆ ಇಂಡೋ - ಅಮೆರಿಕ ನಡುವೆ $3 ಬಿಲಿಯನ್ ಮಹತ್ವದ​ ಒಪ್ಪಂದ: ಟ್ರಂಪ್​ ಘೋಷಣೆ - ಅಮೆರಿಕ ಅಧ್ಯಕ್ಷ ಟ್ರಂಪ್​

ಭಾರತದ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮಹತ್ವದ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಘೋಷಣೆ ಮಾಡಿದ್ದಾರೆ.

President Trump
President Trump

By

Published : Feb 24, 2020, 4:58 PM IST

Updated : Feb 24, 2020, 5:48 PM IST

ಅಹ್ಮದಾಬಾದ್​:ವಿಶ್ವದ ದೊಡ್ಣಣ್ಣ ಎಂದು ಕರೆಯಿಸಿಕೊಳ್ಳುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಭಾರತದ ಪ್ರವಾಸ ಕೈಗೊಂಡಿದ್ದು, ಇಡೀ ವಿಶ್ವದ ಕಣ್ಣು ಇದೀಗ ಭಾರತದ ಮೇಲೆ ನೆಟ್ಟಿದೆ.

ಉಭಯ ದೇಶಗಳ ನಡುವೆ ಯಾವೆಲ್ಲ ಒಪ್ಪಂದಗಳು ನಡೆಯಲಿವೆ ಎಂಬುದು ವಿಶ್ವದ ಕಾತುರಕ್ಕೆ ಕಾರಣವಾಗಿದ್ದು, ಇದರ ಮಧ್ಯೆ ಗುಜರಾತ್​ನ ಮೊಟೆರಾ ಕ್ರಿಕೆಟ್​ ಮೈದಾನದಲ್ಲಿ ನಡೆದ 'ನಮಸ್ತೆ ಟ್ರಂಪ್'​ ವೇಳೆ ಅಮೆರಿಕ ಅಧ್ಯಕ್ಷ ಮಹತ್ವದ ಒಪ್ಪಂದದ ಬಗ್ಗೆ ಮಾತನಾಡಿದ್ದಾರೆ.

ಇಂಡೋ - ಅಮೆರಿಕ ನಡುವೆ $3 ಬಿಲಿಯನ್ ಮಹತ್ವದ​ ಒಪ್ಪಂದ

ಭಾಷಣದ ವೇಳೆ ಮಾತನಾಡಿದ ಟ್ರಂಪ್,​ ನಾಳೆ ಉಭಯ ದೇಶಗಳ ನಡುವೆ ಹೆಲಿಕಾಪ್ಟರ್​ ಸೇರಿದಂತೆ ರಕ್ಷಣಾ ವಲಯದಲ್ಲಿ ಬರೋಬ್ಬರಿ $3 ಬಿಲಿಯನ್​ ಒಪ್ಪಂದ ಏರ್ಪಡಲಿದೆ ಎಂದು ತಿಳಿಸಿದ್ದಾರೆ. ಈ ಹಿಂದಿನಿಂದಲೂ ಉಭಯ ದೇಶಗಳ ನಡುವೆ ರಕ್ಷಣಾ ವಲಯದಲ್ಲಿ ಮಹತ್ವದ ಒಪ್ಪಂದಗಳು ನಡೆಯುತ್ತಿದ್ದು, ಇದೀಗ ಮತ್ತೊಂದು ಒಪ್ಪಂದಕ್ಕೆ ಎರಡು ದೇಶಗಳು ಸಹಿ ಹಾಕಲಿವೆ.

ಇದಲ್ಲದೇ 24 MH-60R ಸಿಕೋರ್‌ಸ್ಕಿ ಹೆಲಿಕಾಪ್ಟರ್​ಗಾಗಿ 42.4 ಬಿಲಿಯನ್​​, ಅಪಾಚೆ ಎಹೆಚ್ -64 ಇ ಅಟ್ಯಾಕ್​ ಹೆಲಿಕಾಪ್ಟರ್‌ ಒಪ್ಪಂದ ಸಹ ನಡೆಯಲಿದೆ. ಕಳೆದ ವಾರದ ನಡೆದ ಕ್ಯಾಬಿನೆಟ್​ನಲ್ಲಿ ಈ ಒಪ್ಪಂದಕ್ಕೆ ಅಂಗೀಕಾರ ಸಿಕ್ಕಿದೆ.

ಇದರ ಮಧ್ಯೆ ಉಗ್ರ ಸಂಘಟನೆಗಳ ವಿರುದ್ಧ ಭಾರತ-ಅಮೆರಿಕ ಸಮರ ಸಾರಿದ್ದು, ಯಾವುದೇ ಕಾರಣಕ್ಕೂ ಅವು ಬೆಳೆಯುವುದಕ್ಕೆ ಬಿಡುವುದಿಲ್ಲ ಎಂದು ಮತ್ತೊಮ್ಮೆ ಘೋಷಣೆ ಮಾಡಿದ್ದಾರೆ.

Last Updated : Feb 24, 2020, 5:48 PM IST

ABOUT THE AUTHOR

...view details