ಕರ್ನಾಟಕ

karnataka

ETV Bharat / bharat

ನಾಲ್ಕೇ ದಿನಗಳಲ್ಲಿ ಭಾರತ-ಇಂಗ್ಲೆಂಡ್​ ನಡುವೆ ವಿಮಾನ ಸೇವೆ ಪುನಾರಂಭ: ಹರ್ದೀಪ್ ಸಿಂಗ್ ಪುರಿ

ಭಾರತದಿಂದ ಬ್ರಿಟನ್​ಗೆ ಜನವರಿ 6ರಿಂದ ಹಾಗೂ ಬ್ರಿಟನ್​ನಿಂದ ಭಾರತಕ್ಕೆ ಜನವರಿ 8ರಿಂದ ಮತ್ತೆ ವಿಮಾನಗಳು ಹಾರಾಟ ನಡೆಸಲಿವೆ ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ಟ್ವೀಟ್​ ಮಾಡಿ ತಿಳಿಸಿದ್ದಾರೆ.

Hardeep Singh Puri
ಹರ್ದೀಪ್ ಸಿಂಗ್ ಪುರಿ

By

Published : Jan 2, 2021, 5:16 PM IST

ನವದೆಹಲಿ:ಭಾರತ ಹಾಗೂ ಇಂಗ್ಲೆಂಡ್​ ನಡುವಿನ ವಿಮಾನ ಸೇವೆ ಮತ್ತೆ ಪುನಾರಂಭಗೊಳ್ಳುತ್ತಿದೆ. ಭಾರತದಿಂದ ಬ್ರಿಟನ್​ಗೆ ಜನವರಿ 6ರಿಂದ ಹಾಗೂ ಬ್ರಿಟನ್​ನಿಂದ ಭಾರತಕ್ಕೆ ಜನವರಿ 8ರಿಂದ ಮತ್ತೆ ವಿಮಾನಗಳು ಹಾರಾಟ ನಡೆಸಲಿವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ.

ಭಾರತದಿಂದ 15 ಹಾಗೂ ಯುಕೆಯಿಂದ 15 ವಿಮಾನಗಳಂತೆ ಪ್ರತಿ ವಾರ 30 ವಿಮಾನಗಳು ಉಭಯ ರಾಷ್ಟ್ರಗಳ ನಡುವೆ ಹಾರಾಡಲಿದೆ. ಈ ವೇಳಾಪಟ್ಟಿಯು ಜನವರಿ 23ರವರೆಗೆ ಮಾನ್ಯವಾಗಿರುತ್ತದೆ. ಪರಿಶೀಲನೆ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪುರಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಅಮೆರಿಕದಲ್ಲಿ 20 ಮಿಲಿಯನ್​ ಗಡಿ ದಾಟಿದ ಕೊರೊನಾ ಕೇಸ್: ಮೂರೂವರೆ ಲಕ್ಷ ಮಂದಿ ಬಲಿ

ಈ ಹಿಂದೆ ಸಚಿವರು ಜ. 8ರಿಂದ ಭಾರತ - ಯುಕೆ ನಡುವೆ ವಿಮಾನ ಸೇವೆ ಪುನಾರಂಭಗೊಳ್ಳಲಿದೆ ಎಂದು ತಿಳಿಸಿದ್ದರು. ಇಂಗ್ಲೆಂಡ್​ನಲ್ಲಿ ಕೋವಿಡ್​ ಹೊಸ ರೂಪ ಪಡೆದ ಹಿನ್ನೆಲೆ ರೂಪಾಂತರಿ ವೈರಸ್​ ಹರಡುವುದನ್ನು ತಡೆಯಲು ಭಾರತವು ಎರಡು ದೇಶಗಳನ್ನು ಸಂಪರ್ಕಿಸುವ ಎಲ್ಲಾ ಪ್ರಯಾಣಿಕ ವಿಮಾನಗಳನ್ನು ಡಿ. 23ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.

ABOUT THE AUTHOR

...view details