ಭುವನೇಶ್ವರ:ಜಲಾಂತರ್ಗಾಮಿ ನೌಕೆಗಳ ಮೂಲಕ ಶತ್ರುಗಳ ಮೇಲಿನ ದಾಳಿಯನ್ನು ಮತ್ತಷ್ಟು ಬಲಗೊಳಿಸಲು ಭಾರತ ಆಂಧ್ರಪ್ರದೇಶದ ಕರಾವಳಿ ತೀರದಿಂದ 3,500 ಕಿಲೋಮೀಟರ್ ಸ್ಟ್ರೈಕ್-ರೇಂಜ್ ಸಾಮರ್ಥ್ಯದ ಕೆ-4 ಪರಮಾಣು ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿದೆ.
ಡಿಆರ್‌ಡಿಒ ಮೈಲಿಗಲ್ಲು: ಜಲಾಂತರ್ಗಾಮಿಯಿಂದ ಹಾರಿ ದಾಳಿ ಮಾಡಬಲ್ಲ ಖಂಡಾಂತರ ಕ್ಷಿಪಣಿ ಯಶಸ್ವಿ ಪರೀಕ್ಷೆ!
ಈಗಾಗಲೇ ನಿರ್ಮಿಸಲಾಗುತ್ತಿರುವ ಅರಿಹಂತ್ ಶ್ರೇಣಿಯ ಅಣ್ವಸ್ತ್ರಸಹಿತ ಜಲಾಂತರ್ಗಾಮಿ ನೌಕೆಗಾಗಿ ಖಂಡಾಂತರ ಕ್ಷಿಪಣಿ ವ್ಯವಸ್ಥೆಯನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸುತ್ತಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂ ಕರಾವಳಿ ತೀರದಿಂದ ಕೆ-4 ಪರಮಾಣು ಕ್ಷಿಪಣಿ ಯಶಸ್ವಿ ಪರೀಕ್ಷೆ ನಡೆದಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
3,500 ಕಿ.ಮೀ ಸ್ಟ್ರೈಕ್ ರೇಂಜ್ ಪರಮಾಣು ಸಾಮರ್ಥ್ಯದ ಜಲಾಂತರ್ಗಾಮಿ ನೌಕೆ ಯಶಸ್ವಿ
ಭಾರತ ನಿರ್ಮಿಸುತ್ತಿರುವ ಅರಿಹಂತ್ ಶ್ರೇಣಿಯ ಪರಮಾಣು ಜಲಾಂತರ್ಗಾಮಿ ನೌಕೆಗಳಿಗಾಗಿ ಕ್ಷಿಪಣಿ ವ್ಯವಸ್ಥೆಯನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸುತ್ತಿದೆ. ಈ ಜಲಾಂತರ್ಗಾಮಿ ನೌಕೆಗಳು ಭಾರತದ ರಕ್ಷಣೆಯ ನಿಟ್ಟಿನಲ್ಲಿ ಮಹತ್ವದ ಭಾಗವಾಗಿದೆ.
ಡಿಆರ್‌ಡಿಒ ಅಭಿವೃದ್ದಿಪಡಿಸುತ್ತಿರುವ ಕೆ-4 ಖಂಡಾಂತರ ಬಾಲಿಸ್ಟಿಕ್ ಕ್ಷಿಪಣಿಯನ್ನು ನೌಕಾದಳದ ದೇಶಿ ನಿರ್ಮಿತ ಅಣ್ವಸ್ತ್ರ ಸಾಮರ್ಥ್ಯ ಹೊಂದಿರುವ ಐಎನ್ಎಸ್ ಅರಿಹಂತ್ ಕ್ಲಾಸ್ ಜಲಾಂತರ್ಗಾಮಿಯಲ್ಲಿ ಬಳಸಲಾಗುತ್ತದೆ.