ವಾಷಿಂಗ್ಟನ್: ಕೊರೊನಾ ವಿರುದ್ಧ ಹೋರಾಡಲು ವಿಶ್ವಬ್ಯಾಂಕ್ ಭಾರತಕ್ಕೆ ಒಂದು ಬಿಲಿಯನ್ ಡಾಲರ್ ತುರ್ತು ನಿಧಿ ಘೋಷಣೆ ಮಾಡಿದೆ. ಕೊರೊನಾ ಶಂಕಿತರ ಸ್ಕ್ರೀನಿಂಗ್ ಮಾಡುವುದು ಹಾಗೂ ಕೊರೊನಾ ಸೋಂಕಿತರ ಚಿಕಿತ್ಸೆಗೆ ಸಾಮಗ್ರಿಗಳ ಖರೀದಿಗೆ ಈ ನಿಧಿಯನ್ನು ಬಳಸಿಕೊಳ್ಳಬೇಕೆಂದು ಸೂಚಿಸಿದೆ.
ಒಟ್ಟು 40 ರಾಷ್ಟ್ರಗಳಿಗೆ ವಿಶ್ವ ಬ್ಯಾಂಕ್ ಅನುದಾನ ಘೋಷಣೆ ಮಾಡಿದೆ. ಮುಂದಿನ 15 ತಿಂಗಳಲ್ಲಿ 160 ಬಿಲಿಯನ್ ಡಾಲರ್ ಅನ್ನು ಕೊರೊನಾ ಪೀಡಿತ ರಾಷ್ಟ್ರಗಳಿಗೆ ಹಂಚಲು ನಿರ್ಧರಿಸಲಾಗಿದ್ದು, ದೇಶಗಳನ್ನು ಸಂಕಷ್ಟದಿಂದ ಪಾರು ಮಾಡಲು ಹಾಗೂ ಆರ್ಥಿಕತೆಯ ಪುನಶ್ಚೇತನಕ್ಕೆ ಸಹಕಾರ ನೀಡಲಿದೆ.