ಬೀಜಿಂಗ್:ಚೀನಾದ ಪ್ರಯಾಣಿಕರು ಮತ್ತು ಚೀನಾ ದೇಶದಲ್ಲಿ ವಾಸಿಸುವ ಇತರ ವಿದೇಶಿ ಪ್ರಜೆಗಳಿಗೆ ಭಾರತ ತನ್ನ ಇ-ವೀಸಾ ಸೌಲಭ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಚೀನಾದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಸುಮಾರು 300 ಜನರನ್ನು ಬಲಿತೆಗೆದುಕೊಂಡಿದೆ. ಹಾಗಾಗಿ ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೂ ಈ ನಿರ್ಧಾರ ಕೈಗೊಂಡಿದೆ.
ಚೀನಾದ ಪಾಸ್‌ಪೋರ್ಟ್‌ಗಳನ್ನು ಹೊಂದಿರುವವರು ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದಲ್ಲಿ ವಾಸಿಸುವ ಇತರ ರಾಷ್ಟ್ರೀಯತೆ ಹೊಂದಿರುವ ಅರ್ಜಿದಾರರಿಗೆ ಇದು ಅನ್ವಯಿಸುತ್ತದೆ ಎಂದು ರಾಯಭಾರ ಕಚೇರಿ ಟ್ವೀಟ್ ಮಾಡಿದೆ.
ಒಂದು ವೇಳೆ ದೇಶಕ್ಕೆ ಭೇಟಿ ನೀಡಬೇಕೆಂದರೇ ಬಲವಾದ ಕಾರಣಗಳನ್ನು ನೀಡಿ, ಬಳಿಕ ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಶಾಂಘೈ ಅಥವಾ ಗುವಾಂಗ್ ರಾಯಭಾರ ಕಚೇರಿ ಮತ್ತು ನಗರಗಳಲ್ಲಿನ ಭಾರತೀಯ ವೀಸಾ ಅರ್ಜಿ ಕೇಂದ್ರಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಈ ವೈರಸ್ ಡಿಸೆಂಬರ್‌ನಲ್ಲಿ ಚೀನಾದ ನಗರವಾದ ವುಹಾನ್‌ನಲ್ಲಿ ಹುಟ್ಟಿಕೊಂಡಿತು ಮತ್ತು ಅಂದಿನಿಂದ ವಿಶ್ವದ ವಿವಿಧ ನಗರಗಳಿಗೆ ಹರಡಿದೆ. ಚೀನಾದಲ್ಲಿ ಈ ವೈರಸ್ ಪ್ರಕರಣಗಳು ಈಗ 14,000 ದಾಟಿದೆ.