ಕರ್ನಾಟಕ

karnataka

ETV Bharat / bharat

ರೂಪಾಂತರವಾದ ಕೊರೊನಾ ವೈರಸ್​​​: ಡಿ. 31ರವರೆಗೆ ಭಾರತ-ಬ್ರಿಟನ್​​​ ವಿಮಾನ ಸೇವೆ ರದ್ದು - ವಿಮಾನಯಾನ ಸೇವೆ ರದ್ದು

ಕೊರೊನಾ ವೈರಸ್ ರೂಪಾಂತರವಾಗಿ ಇಂಗ್ಲೆಂಡ್​ನಲ್ಲಿ ಹೆಚ್ಚು ಅವಾಂತರಗಳನ್ನು ಸೃಷ್ಟಿಸುತ್ತಿರುವ ಬೆನ್ನಲ್ಲೇ ಆ ದೇಶದಿಂದ ಬರುವ ವಿಮಾನಗಳನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ.

India suspends flights from Uk
ವಿಮಾನಯಾನ ಸೇವೆ ರದ್ದು

By

Published : Dec 21, 2020, 4:57 PM IST

ನವದೆಹಲಿ:ಬ್ರಿಟನ್​ನಲ್ಲಿ ಕೊರೊನಾ ವೈರಸ್ ರೂಪಾಂತರವಾಗಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ರೂಪಾಂತರವಾದ ಕೊರೊನಾ ಭಾರತಕ್ಕೆ ಹರಡದಂತೆ ತಡೆಯಲು ಇಂಗ್ಲೆಂಡ್​ನಿಂದ ಭಾರತಕ್ಕೆ ಬರುವ ಎಲ್ಲಾ ವಿಮಾನಗಳನ್ನು ಡಿಸೆಂಬರ್ 31ರವರೆಗೆ ಸ್ಥಗಿತಗೊಳಿಸಲಾಗಿದೆ.

ಈ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ ಟ್ವೀಟ್ ಮಾಡಿದ್ದು, ಇಂಗ್ಲೆಂಡ್​ನಲ್ಲಿ ಈಗಿರುವ ಪರಿಸ್ಥಿತಿಯನ್ನು ಪರಿಗಣಿಸಲಾಗಿದೆ. ನಾಳೆ ರಾತ್ರಿ 12 ಗಂಟೆಯಿಂದ ಡಿಸೆಂಬರ್ 31ರವರೆಗೆ ವಿಮಾನಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ:ತಕ್ಷಣದಿಂದಲೇ ಬ್ರಿಟನ್​ನಿಂದ ಬರುವ ವಿಮಾನಗಳನ್ನು ರದ್ದುಪಡಿಸಿ: ಕೇಜ್ರಿವಾಲ್ ಟ್ವೀಟ್​

ನಾಗರಿಕ ವಿಮಾನಯಾನ ಸಚಿವಾಲಯದ ಈ ನಿರ್ಧಾರದಿಂದ ಎರಡೂ ರಾಷ್ಟ್ರಗಳ ನಡುವೆ ತಾತ್ಕಾಲಿಕವಾಗಿ ವಿಮಾನಯಾನ ಸೇವೆಯಲ್ಲಿ ವ್ಯತ್ಯಾಸವಾಗಲಿದೆ ಎನ್ನಲಾಗಿದೆ. ಈಗ ಸದ್ಯಕ್ಕೆ ಇಂಗ್ಲೆಂಡ್​​ನಿಂದ ಬರುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಕೊರೊನಾ ಸೋಂಕು ಪತ್ತೆ ಹಚ್ಚುವ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಲಾಗುತ್ತದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಈ ಮೊದಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದು, ಕೊರೊನಾದ ರೂಪಾಂತರವಾದ ವೈರಸ್ ತಡೆಯಲು ತಕ್ಷಣವೇ ಇಂಗ್ಲೆಂಡ್​ಗೆ ವಿಮಾನಯಾನ ಸೇವೆ ನಿಷೇಧಿಸಬೇಕೆಂದು ಒತ್ತಾಯ ಮಾಡಿದ್ದರು.

ABOUT THE AUTHOR

...view details