ಕರ್ನಾಟಕ

karnataka

ETV Bharat / bharat

ಭಾರತದಿಂದ 25ಕ್ಕೂ ಹೆಚ್ಚು ಆಫ್ರಿಕನ್ ದೇಶಗಳಿಗೆ ಔಷಧಿ ಪೂರೈಕೆ..

ಕೊರೊನಾ ಪೀಡಿತ ಆಫ್ರಿಕಾದ 25ಕ್ಕೂ ಹೆಚ್ಚು ದೇಶಗಳಿಗೆ ಭಾರತ ಔಷಧಿಗಳ ಪ್ಯಾಕೇಜ್‌ಗಳನ್ನು ರವಾನಿಸುತ್ತಿದೆ. ಔಷಧಿಗಳ ಈ ಪ್ಯಾಕೇಜ್ ಹೈಡ್ರಾಕ್ಸಿಕ್ಲೋರೋಕ್ವಿನ್, ಪ್ಯಾರೆಸಿಟಮಾಲ್ ಮತ್ತು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ತಕ್ಷಣ ಅಗತ್ಯವಿರುವ ಇತರ ಔಷಧಿಗಳನ್ನು ಒಳಗೊಂಡಿದೆ.

India supplies medicines
ಭಾರತದಿಂದ 25ಕ್ಕೂ ಹೆಚ್ಚು ಆಫ್ರಿಕನ್ ದೇಶಗಳಿಗೆ ಔಷಧಿ ಪೂರೈಕೆ

By

Published : May 9, 2020, 8:20 PM IST

ನವದೆಹಲಿ :ಆಫ್ರಿಕಾದೊಂದಿಗೆ ಪ್ರಬಲ ಸ್ನೇಹ ಸಂಬಂಧ ಹೊಂದಿದ್ದ ಭಾರತ, ಇಂದು ಕೊರೊನಾ ಪೀಡಿತ ಆಫ್ರಿಕಾದ ವಿವಿಧ ದೇಶಗಳ ಸಹಾಯಕ್ಕೆ ನಿಂತಿದೆ.

ಕೊರೊನಾ ಪೀಡಿತ ಆಫ್ರಿಕಾದ 25ಕ್ಕೂ ಹೆಚ್ಚು ದೇಶಗಳಿಗೆ ಭಾರತ ಔಷಧಿಗಳ ಪ್ಯಾಕೇಜ್‌ಗಳನ್ನು ರವಾನಿಸುತ್ತಿದೆ. ಔಷಧಿಗಳ ಈ ಪ್ಯಾಕೇಜ್ ಹೈಡ್ರಾಕ್ಸಿಕ್ಲೋರೋಕ್ವಿನ್, ಪ್ಯಾರೆಸಿಟಮಾಲ್ ಮತ್ತು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ತಕ್ಷಣ ಅಗತ್ಯವಿರುವ ಇತರ ಔಷಧಿಗಳನ್ನು ಒಳಗೊಂಡಿದೆ. ಇದಕ್ಕೂ ಮೊದಲು 2020ರ ಏಪ್ರಿಲ್ ತಿಂಗಳಲ್ಲಿ ಭಾರತದ ವಿದೇಶಾಂಗ ಸಚಿವರು ಹಲವಾರು ಆಫ್ರಿಕನ್ ದೇಶಗಳಲ್ಲಿನ ತಮ್ಮ ಸಹವರ್ತಿಗಳೊಂದಿಗೆ ಮಾತನಾಡುತ್ತಾ, ಕೋವಿಡ್​-19 ವಿರುದ್ಧದ ಹೋರಾಟದಲ್ಲಿ ಆಫ್ರಿಕನ್ ಜನರೊಂದಿಗೆ ಭಾರತದ ಬೆಂಬಲವನ್ನು ವ್ಯಕಪಡಿಸಿದ್ದರು. ಮತ್ತು ಅವರಿಗೆ ಎಲ್ಲಾ ಸಹಾಯ ನೀಡುವ ಭರವಸೆ ನೀಡಿದ್ದರು.

ಇದಲ್ಲದೆ ಆಫ್ರಿಕಾ ವಿದೇಶಾಂಗ ಸಚಿವಾಲಯವು ತನ್ನ ಪಾಲುದಾರ ಏಮ್ಸ್ ರಾಯ್‌ಪುರ್ ಜೊತೆಗೆ ಆಯೋಜಿಸಿರುವ ಕೋವಿಡ್​-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವಿಕೆ ಮತ್ತು ನಿರ್ವಹಣಾ ಮಾರ್ಗಸೂಚಿಗಳು ಕುರಿತು ಆರೋಗ್ಯ ಕಾರ್ಯಕರ್ತರು ಮತ್ತು ಇತರರಿಗಾಗಿ ಇ-ಐಟಿಇಸಿ ಕೋರ್ಸ್‌ನ ಈಗ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಆರಂಭಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಏಪ್ರಿಲ್ 17, ದಕ್ಷಿಣ ಆಫ್ರಿಕಾದ ಅಧ್ಯಕ್ಷ ರಾಮಾಫೋಸಾ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಸಂಭಾಷಣೆಯಲ್ಲಿ ಪ್ರಧಾನ ಮಂತ್ರಿಯವರು ಕೊರೊನಾ ವೈರಸ್ ವಿರುದ್ಧದ ಆಫ್ರಿಕನ್ ಹೋರಾಟಕ್ಕೆ ಭಾರತದ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು.

ABOUT THE AUTHOR

...view details