ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನಡೆಸಿದ ವಿಕಿರಣ ನಿರೋಧಕ ಕ್ಷಿಪಣಿ ರುದ್ರಂ-1 ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ಒಡಿಶಾದ ಕರಾವಳಿ ತೀರದಲ್ಲಿ ಈ ಪರೀಕ್ಷೆ ನಡೆಸಲಾಗಿದೆ.
ರುದ್ರಂ-1 ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದ್ದಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ. ಸುಖೋಯ್-30 ಯುದ್ಧ ವಿಮಾನಕ್ಕೆ ರುದ್ರಂ-1 ಆ್ಯಂಟಿ ರೇಡಿಯೇಷನ್ ಮಿಸೈಲ್ ಅಳವಡಿಕೆ ಮಾಡಿ ಪರೀಕ್ಷೆ ನಡೆಸಲಾಗಿದ್ದು, ಕರಾರುವಕ್ಕಾಗಿ ದಾಳಿ ಭೇದಿಸಿದೆ. ಬೆಳಗ್ಗೆ 10:30ಕ್ಕೆ ಒಡಿಶಾದ ಬಲಾಸೋರ್ದಲ್ಲಿ ಈ ಪರೀಕ್ಷೆ ನಡೆಸಲಾಗಿದೆ.
ದೇಶೀ ನಿರ್ಮಿತ 'ಶೌರ್ಯ' ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿ
ಹೊಸ ತಲೆಮಾರಿಣ ವಿಕಿರಣ ವಿರೋಧಿ ಕ್ಷಿಪಣಿ ಇದಾಗಿದ್ದು, ಭಾರತೀಯ ವಾಯುಸೇನೆಯ ಯದ್ಧ ಶಸ್ತ್ರಾಸ್ತ್ರಗಳ ಭಾಗವಾಲಿದೆ. ಇದನ್ನ ಭಾರತೀಯ ವಾಯಪಡೆಗಾಗಿ ಡಿಆರ್‌ಡಿಒ ಇಂಡಿಯಾ ಅಭಿವೃದ್ಧಿ ಪಡಿಸಿದೆ. ವಾಯುಸೇನೆಯ ಮೊದಲ ಆರ್ಎಆರ್ಎಂ ಕ್ಷಿಪಣಿ ಇದಾಗಲಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಇಂಡಿಯನ್ ಏರ್ ಸುಖೋಯ್-30 ಎಂಕೆಐ ಯುದ್ಧ ವಿಮಾನದಿಂದ ಬ್ರಹ್ಮೋಸ್ ಕ್ಷಿಪಣಿ ವೈಮಾನಿಕ ಆವೃತ್ತಿ ಯಶಸ್ವಿ ಪರೀಕ್ಷೆ ನಡೆಸಲಾಗಿತ್ತು.
ರುದ್ರಂ-1 5.5 ಮೀಟರ್ ಉದ್ದ, 140 ಕೆ.ಜಿ ಭಾರವಿದ್ದು, 100ರಿಂದ 150 ಕಿಲೋ ಮೀಟರ್ ನಿಖರ ಗುರಿ ಹೊಂದಬಲ್ಲ ಆ್ಯಂಟಿ ರೇಡಿಯೇಷನ್ ಮಿಸೈಲ್ ಎಂಬುದು ಗಮನಾರ್ಹ ಸಂಗತಿ. ಮುಂದಿನ ದಿನಗಳಲ್ಲಿ ಮಿರಾಜ್ 2000, ಜಾಗ್ವಾರ್, ಹೆಚ್ಎಎಲ್ ತೇಜಸ್ ವಿಮಾನಗಳಲ್ಲೂ ಇದನ್ನ ಅಳವಡಿಕೆ ಮಾಡುವ ಸಾಧ್ಯತೆ ಇದೆ.