ನವದೆಹಲಿ: ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ಗಳಿಗೆ ಪಿಪಿಇ ಕಿಟ್ ಅಗತ್ಯ. ಈ ಹಿನ್ನೆಲೆಯಲ್ಲಿ ನಿತ್ಯ ಸುಮಾರು 6 ಲಕ್ಷಕ್ಕೂ ಅಧಿಕ ಪಿಪಿಇ ಕಿಟ್ಗಳನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತಿದೆ. ಸದ್ಯ ದೇಶದಲ್ಲಿ ಅಗತ್ಯಕ್ಕೆ ಅನುಸಾರವಾಗಿ ಕಿಟ್ಗಳನ್ನು ಶೇಖರಿಸಿಕೊಂಡು ಉಳಿದ ಕಿಟ್ಗಳನ್ನು ಅಮೆರಿಕ ಹಾಗೂ ಯುರೋಪ್ ರಾಷ್ಟ್ರಗಳಿಗೆ ರಫ್ತು ಮಾಡಲು ಭಾರತ ತೀರ್ಮಾನಿಸಿದೆ.
ಕೊರೊನಾ ಸೋಂಕು ದೇಶದಲ್ಲಿ ಅಟ್ಟಹಾಸ ಶುರು ಮಾಡಿದ ಪ್ರಾರಂಭದಲ್ಲಿ ಇತರ ಹೊರ ದೇಶಗಳಿಂದ ಸುಮಾರು 80 ಸಾವಿರ ಪಿಪಿಇ ಕಿಟ್ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಅಷ್ಟೇ ಅಲ್ಲದೇ, ವೆಂಟಿಲೇಟರ್‌ಗಳ ತಯಾರಿಕೆಗೂ ಅಗತ್ಯ ವಸ್ತುಗಳನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳಲಾಗಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಬದಲಾವಣೆಯಾಗಿದ್ದು, ಭಾರತದಲ್ಲೇ 50ಕ್ಕೂ ಹೆಚ್ಚು ಕಂಪನಿಗಳು ವೆಂಟಿಲೇಟರ್ಗಳನ್ನು ಹಾಗೂ 600ಕ್ಕೂ ಹೆಚ್ಚು ಕಂಪನಿಗಳು ಪಿಪಿಇ ಕಿಟ್ಗಳನ್ನು ತಯಾರಿಸುತ್ತಿವೆ.