ನವದೆಹಲಿ:ವಿಶ್ವಸಂಸ್ಥೆಯಲ್ಲಿ ನವದೆಹಲಿ ವಿರುದ್ಧ ಸುಳ್ಳು ದಾಖಲೆಯನ್ನು ಪ್ರಸ್ತುತ ಪಡಿಸಿದ್ದಕ್ಕಾಗಿ ಭಾರತ ಮಂಗಳವಾರ ಇಸ್ಲಾಮಾಬಾದ್ ಅನ್ನು ದೂಷಿಸಿದೆ. ದಾಖಲೆಗಳನ್ನು ರಚಿಸುವುದು ಮತ್ತು ಸುಳ್ಳು ಹೇಳಿಕೆ ನೀಡುವುದು ಪಾಕಿಸ್ತಾನಕ್ಕೆ ಹೊಸತಲ್ಲ ಎಂದಿದೆ.
ವಿಶ್ವಸಂಸ್ಥೆಯಲ್ಲಿ ಸುಳ್ಳು ಹೇಳಿಕೆ...ಪಾಕ್ ತರಾಟೆಗೆ ತೆಗೆದುಕೊಂಡ ಭಾರತ! - ವಿಶ್ವಸಂಸ್ಥೆಯಲ್ಲಿ ನವದೆಹಲಿ ವಿರುದ್ಧ ಸುಳ್ಳು ದಾಖಲೆ ತೋರಿಸಿದ ಪಾಕಿಸ್ತಾನ
ಯುಎನ್‌ನಲ್ಲಿ ನವದೆಹಲಿ ವಿರುದ್ಧ ಸುಳ್ಳು ದಾಖಲೆಯನ್ನು ಪ್ರಸ್ತುತ ಪಡಿಸಿದ್ದಕ್ಕಾಗಿ ಪಾಕ್ ಅನ್ನು ಭಾರತ ದೂಷಿಸಿದೆ. ಯುಎನ್‌ನ ಭಾರತದ ಖಾಯಂ ಪ್ರತಿನಿಧಿ, ರಾಯಭಾರಿ ಟಿ.ಎಸ್. ತಿರೂಮೂರ್ತಿ ಈ ಕುರಿತು ಟ್ವಿಟರ್ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
ಪಾಕಿಸ್ತಾನಕ್ಕೆ ಸೇರಿದ ನಾಲ್ವರು ಭಯೋತ್ಪಾದಕರು ಕಳೆದ ವಾರ ನಡೆಸಿದ ಭಯೋತ್ಪಾದಕ ಪ್ರಯತ್ನದ ಕುರಿತು ನವದೆಹಲಿ ಕೆಲವು ಯುಎನ್ ಸೆಕ್ಯುರಿಟಿ ಕೌನ್ಸಿಲ್ ಸದಸ್ಯರಿಗೆ ಪತ್ರವೊಂದನ್ನು ನೀಡಿತ್ತು. ಇದಾದ ಒಂದು ದಿನದ ಬಳಿಕ ಪಾಕಿಸ್ತಾನದಲ್ಲಿ ಭಾರತ ಭಯೋತ್ಪಾದನೆ ಪ್ರಚೋದಿಸಿದೆ ಎಂದು ಆರೋಪಿಸುವ ಪತ್ರವನ್ನು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರಿಗೆ ಪಾಕಿಸ್ತಾನ ನೀಡಿದೆ.
ಯುಎನ್‌ನಲ್ಲಿ ಪಾಕಿಸ್ತಾನದ ಈ ಕ್ರಮಕ್ಕೆ ಪ್ರತಿಕ್ರಿಯಿಸಿದ ಯುಎನ್‌ನ ಭಾರತದ ಖಾಯಂ ಪ್ರತಿನಿಧಿ, ರಾಯಭಾರಿ ಟಿ.ಎಸ್.ತಿರೂಮೂರ್ತಿ, ಪಾಕಿಸ್ತಾನ ಮಂಡಿಸಿದ ಸುಳ್ಳಿನ ದಾಖಲೆ ಶೂನ್ಯ ವಿಶ್ವಾಸಾರ್ಹತೆ ಹೊಂದಿದೆ. ದಾಖಲೆಗಳನ್ನು ರಚಿಸುವುದು ಮತ್ತು ಸುಳ್ಳು ಹೇಳಿಕೆ ನೀಡುವುದು ಪಾಕಿಸ್ತಾನಕ್ಕೆ ಹೊಸತಲ್ಲ. ವಿಶ್ವದ ಅತಿ ಹೆಚ್ಚು ಸಂಖ್ಯೆಯ ಯುಎನ್ ನಿಷೇಧಿತ ಭಯೋತ್ಪಾದಕರು ಮತ್ತು ಘಟಕಗಳಿಗೆ ಪಾಕಿಸ್ತಾನವು ಆತಿಥೇಯವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
TAGGED:
India Pak UN news