ನವದೆಹಲಿ:ಕೊರೊನಾ ಸೋಂಕಿನ ವಿಚಾರದಲ್ಲಿ ಇಡೀ ಪ್ರಪಂಚವೇ ಚೀನಾವನ್ನು ದ್ವೇಷಿಸುತ್ತಿರುವ ಈ ಸಮಯವನ್ನು ಭಾರತ ದೊಡ್ಡ ಪ್ರಮಾಣದ ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ತನ್ನ ಆರ್ಥಿಕ ಅವಕಾಶಕ್ಕಾಗಿ ಬಳಸಿಕೊಳ್ಳಬೇಕು ಎಂದು ಕೇಂದ್ರ ಸಚಿವ ನಿತಿನಿ ಗಡ್ಕರಿ ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ವಿದೇಶಗಳಲ್ಲಿರುವ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುತ್ತಿದ್ದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ಗಡ್ಕರಿ, 'ಪ್ರಪಂಚದಾದ್ಯಂತ, ಚೀನಾದ ಬಗ್ಗೆ ದ್ವೇಷದ ಭಾವನೆ ಮೂಡಿದೆ. ಇದನ್ನು ಭಾರತ ಒಂದು ಅವಕಾಶವಾಗಿ ಪರಿವರ್ತಿಸಲು ಸಾಧ್ಯವಿದೆ' ಎಂದು ಹೇಳಿದ್ದಾರೆ