ನವದೆಹಲಿ:ಲಡಾಖ್ ಭಾಗದಲ್ಲಿ ಚೀನಾ ನಡುವೆ ಘರ್ಷಣೆ ಮುಂದುವರೆದಿರುವ ನಡುವೆ ಭಾರತದ ಭೂಭಾಗ ಪ್ರವೇಶಿಸಿದ್ದ ಓರ್ವ ಚೀನಾ ಯೋಧನನ್ನು ಚೀನಾಗೆ ಹಸ್ತಾಂತರಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಇಲ್ಲಿನ ದಕ್ಷಿಣ ಪ್ಯಾಂಗೊಂಗ್ ಭಾಗದಲ್ಲಿ ಮೂರು ದಿನದ ಹಿಂದೆ ಚೀನಾ ಯೋಧ ಭಾರತದ ಭೂಭಾಗ ಪ್ರವೇಶಿಸಿದ್ದ. 10:30ರ ಸುಮಾರಿಗೆ ವಾಸ್ತವ ಗಡಿ ರೇಖೆಯನ್ನು ದಾಟಿ ಬಂದಿದ್ದ ಚೀನಾ ಯೋಧನನ್ನು ಭಾರತೀಯ ಸೇನೆ ಸೆರೆಹಿಡಿದಿತ್ತು. ಬಳಿಕ ಆತನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಇದೀಗ ಸೇನಾ ನಿಯಮದ ಪ್ರಕಾರ ಆತನನ್ನು ಚೀನಾ ಆರ್ಮಿಗೆ ಹಸ್ತಾಂತರಿಸಲಾಗಿದೆ.
ಭಾರತ-ಚೀನಾ ಯೋಧರ ಮಧ್ಯೆ ಕಳೆದ 8 ತಿಂಗಳಿನಿಂದ ಪೂರ್ವ ಲಡಾಖ್ ಭಾಗದಲ್ಲಿ ಗಡಿ ಗುರುತು ವಿಚಾರವಾಗಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಪ್ಯಾಂಗೊಂಗ್ ನದಿ ದಂಡೆಯಲ್ಲಿ ಉಭಯ ದೇಶದ ಯೋಧರ ನಡುವೆ ಘರ್ಷಣೆ ಉಂಟಾಗಿದೆ.