ನವದೆಹಲಿ: ಭಾರತದಲ್ಲಿ ಕೊರೊನಾ ನಾಗಾಲೋಟ ಮುಂದುವರೆದಿದ್ದು, ಒಂದೇ ದಿನ ಸುಮಾರು 25 ಸಾವಿರ ಕೇಸ್ಗಳು ಪತ್ತೆಯಾಗಿದ್ದರೆ, ಮೃತರ ಸಂಖ್ಯೆ 21 ಸಾವಿರದ ಗಡಿ ದಾಟಿದೆ. ಇನ್ನೊಂದೆಡೆ ಚೇತರಿಕೆಯ ಪ್ರಮಾಣ ಶೇ. 61.5ಕ್ಕೆ ಹೆಚ್ಚಳಗೊಂಡಿದೆ.
ದೇಶದಲ್ಲಿ ಕೊರೊನಾಗೆ 21 ಸಾವಿರ ಬಲಿ: ಶೇ. 61.5 ರಷ್ಟು ರೋಗಿಗಳು ಗುಣಮುಖ - ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 7,67,296ಕ್ಕೆ ಹಾಗೂ ಮೃತರ ಸಂಖ್ಯೆ 21,129ಕ್ಕೆ ಏರಿಕೆಯಾಗಿದೆ.
ಭಾರತದಲ್ಲಿ ಕೊರೊನಾ ಕೇಸ್ಗಳು
ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 24,879 ಸೋಂಕಿತರು ಪತ್ತೆಯಾಗಿದ್ದು, 487 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 7,67,296ಕ್ಕೆ ಹಾಗೂ ಮೃತರ ಸಂಖ್ಯೆ 21,129ಕ್ಕೆ ಏರಿಕೆಯಾಗಿದೆ.
ಒಟ್ಟು ಸೋಂಕಿತರ ಪೈಕಿ ಶೇ. 61.5 ರಷ್ಟು ಅಂದರೆ 4,76,378 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ. ಉಳಿದಂತೆ 2,69,789 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.