ಕರ್ನಾಟಕ

karnataka

ETV Bharat / bharat

ಕಳೆದ 8 ತಿಂಗಳಿಂದ ಇದೇ ಮೊದಲ ಬಾರಿ ಕಡಿಮೆ ಕೋವಿಡ್ ಪ್ರಕರಣಗಳು ಪತ್ತೆ - ಕೋವಿಡ್ ಪ್ರಕರಣಗಳು ಪತ್ತೆ

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 8,635 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1,07,66,245 ಕ್ಕೆ ಏರಿದೆ.

cases
ಕೋವಿಡ್ ಟೆಸ್ಟಿಂಗ್ ಅಪ್​​ಡೇಟ್

By

Published : Feb 2, 2021, 12:17 PM IST

ನವದೆಹಲಿ:ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 8,635 ಕೋವಿಡ್​ ಪ್ರಕರಣಗಳು ಪತ್ತೆಯಾಗಿದ್ದು, 94 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 1,07,66,245 ಹಾಗೂ ಮೃತರ ಸಂಖ್ಯೆ 1,54,486 ಕ್ಕೆ ಏರಿಕೆಯಾಗಿದೆ.

ಆದರೆ ಒಟ್ಟು ಸೋಂಕಿತರ ಪೈಕಿ 1,04,48,406 ಮಂದಿ ಗುಣಮುಖರಾಗಿದ್ದು, 1,69,824 ಕೇಸ್​​ಗಳು ಮಾತ್ರ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ದೇಶದಲ್ಲಿ ಕೊರೊನಾ ವ್ಯಾಕ್ಸಿನೇಷನ್​ ಪ್ರಮಾಣ ಕೂಡ ದಿನೇದಿನೆ ಹೆಚ್ಚುತ್ತಿದೆ. ಈವರೆಗೆ 39,50,156 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ.

ABOUT THE AUTHOR

...view details