ನವದೆಹಲಿ:ದೇಶದಲ್ಲಿ ಕೊರೊನಾ ವೈರಸ್ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ ಹೊಸದಾಗಿ 61,871 ಕೋವಿಡ್ ಕೇಸ್ ಪತ್ತೆಯಾಗಿವೆ. ಇದರ ಜತೆಗೆ 1,033 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.
ದೇಶದಲ್ಲಿ 24 ಗಂಟೆಯಲ್ಲಿ 61,871 ಕೋವಿಡ್ ಕೇಸ್: 1,033 ಮಂದಿ ಸೋಂಕಿಗೆ ಬಲಿ - ಭಾರತ ಕೊರೊನಾ ಸುದ್ದಿ
ಮಹಾಮಾರಿ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 61 ಸಾವಿರಕ್ಕೂ ಅಧಿಕ ಸೋಂಕಿತ ಪ್ರಕರಣ ದಾಖಲಾಗಿವೆ.
![ದೇಶದಲ್ಲಿ 24 ಗಂಟೆಯಲ್ಲಿ 61,871 ಕೋವಿಡ್ ಕೇಸ್: 1,033 ಮಂದಿ ಸೋಂಕಿಗೆ ಬಲಿ COVID19](https://etvbharatimages.akamaized.net/etvbharat/prod-images/768-512-9218545-thumbnail-3x2-wdfdfdf.jpg)
ಸದ್ಯ ದೇಶದಲ್ಲಿ 74,94,552 ಕೋವಿಡ್ ಕೇಸ್ಗಳಿದ್ದು, ಇದರಲ್ಲಿ 7,83,311 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ 65,97,210 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, 1,14,031 ಜನರು ಸಾವನ್ನಪ್ಪಿದ್ದಾರೆ. ನಿನ್ನೆ ಮಹಾರಾಷ್ಟ್ರದಲ್ಲಿ 10,259 ಪ್ರಕರಣ, ಕೇರಳದಲ್ಲಿ 9,016, ಕರ್ನಾಟಕ 7,184, ತಮಿಳುನಾಡು 4,295, ಪಶ್ಚಿಮ ಬಂಗಾಳ 3,865 ಪ್ರಕರಣ ದಾಖಲಾಗಿವೆ.
ಇನ್ನು ವಿಶ್ವದಾದ್ಯಂತ ನಿನ್ನೆ ಒಂದೇ ದಿನ 4 ಲಕ್ಷಕ್ಕೂ ಅಧಿಕ ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಭಾರತ, ಅಮೆರಿಕ ಹಾಗೂ ಬ್ರೇಜಿಲ್ಗಳಿಗಿಂತಲೂ ಯುರೋಪ್ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಕೊರೊನಾ ಸೋಂಕು ಕಾಣಿಸಿಕೊಂಡಿವೆ. ಅಮೆರಿಕದಲ್ಲಿ ಇದೀಗ 8,342,665 ಕೋವಿಡ್ ಸೋಂಕಿತ ಪ್ರಕರಣಗಳಿದ್ದು, ಭಾರತದಲ್ಲಿ 74,94,551 ಕೋವಿಡ್ ಪ್ರಕರಣಗಳಿವೆ.