ನವದೆಹಲಿ: ಭಾರತದಲ್ಲಿ ಕೆಲ ದಿನಗಳಿಂದ 20 ಸಾವಿರಕ್ಕೂ ಅಧಿಕ ಕೋವಿಡ್ ಕೇಸ್ಗಳು ಪತ್ತೆಯಾಗುತ್ತಿದೆ. ಹಾಗೆಯೇ ಚೇತರಿಕೆಯ ಪ್ರಮಾಣ ಶೇ.60 ಕ್ಕಿಂತಲೂ ಹೆಚ್ಚಿದೆ.
ದೇಶದಲ್ಲಿ ಒಂದೇ ದಿನ 22 ಸಾವಿರ ಸೋಂಕಿತರು ಪತ್ತೆ: ಗುಣಮುಖ/ಸಾವಿನ ಪ್ರಮಾಣ 95.48% : 4.52% - India covid
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6,48,315ಕ್ಕೆ ಹಾಗೂ ಮೃತರ ಸಂಖ್ಯೆ 18,655ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸದ್ಯ ಈ ರೋಗದಿಂದ ಗುಣಮುಖವಾಗುತ್ತಿರುವ ಶೇಕಡಾವಾರು ಪ್ರಮಾಣ 60.80 ಇದೆ. ಗುಣಮುಖ/ಸಾವಿನ ಪ್ರಮಾಣ ದೇಶದಲ್ಲಿ ಈಗ 95.48%: 4.52% ರಷ್ಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಕೋವಿಡ್
ಕಳೆದ 24 ಗಂಟೆಗಳಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ಪ್ರಕರಣಗಳು ಎಂಬಂತೆ ಬರೋಬ್ಬರಿ 22,771 ಸೋಂಕಿತರು ಪತ್ತೆಯಾಗಿದ್ದು, 442 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 6,48,315ಕ್ಕೆ ಹಾಗೂ ಮೃತರ ಸಂಖ್ಯೆ 18,655ಕ್ಕೆ ಏರಿಕೆಯಾಗಿದೆ.
ಒಟ್ಟು ಸೋಂಕಿತರ ಪೈಕಿ 3,94,227 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ. ಉಳಿದಂತೆ 2,35,433 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
Last Updated : Jul 4, 2020, 10:38 AM IST