ಕರ್ನಾಟಕ

karnataka

ETV Bharat / bharat

ಸೋಂಕಿತರು, ಮೃತರ ಸಂಖ್ಯೆಯಲ್ಲಿ ಇಳಿಕೆ: ಆದ್ರೂ ಮಾಸ್ಕ್‌ ಬೆಳ್ಳಿ, ಡಿಸ್ಟನ್ಸ್‌ ಬಂಗಾರ - ಮರಣ ಪ್ರಮಾಣ ಶೇ.1.5ಕ್ಕೆ ಇಳಿಕೆ

ಹೆಚ್ಚೆಚ್ಚು ಜನರಿಗೆ ಕೋವಿಡ್​ ಟೆಸ್ಟ್​ ಮಾಡಿದರೂ ಸಹ ದಿನದಿನಕ್ಕೂ ಹೊಸ ಸೋಂಕಿತರ ಹಾಗೂ ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಂಡುಬರುತ್ತಿದೆ. ಆದರೂ ವ್ಯಕ್ತಿಯಿಂದ ವ್ಯಕ್ತಿಗೆ ಆರು ಅಡಿ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದನ್ನು ಮರೆಯದಿರಿ ಎಂದು ಆರೋಗ್ಯ ಇಲಾಖೆ ಎಚ್ಚರಿಸುತ್ತಲೇ ಇದೆ.

India reports 36,469 covid cases and 488 deaths from past 24 hours
ಕೋವಿಡ್​ ಟೆಸ್ಟಿಂಗ್​ ಅಪ್​ಡೇಟ್ಸ್​​

By

Published : Oct 27, 2020, 10:31 AM IST

ನವದೆಹಲಿ:ಕಳೆದ ಮೂರ್ನಾಲ್ಕು ತಿಂಗಳಿಗೆ ಹೋಲಿಸಿದರೆ ಭಾರತದಲ್ಲಿ ನಿನ್ನೆ ವರದಿಯಾದ ಕೋವಿಡ್​ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ತೀರಾ ಕಡಿಮೆಯಿದೆ. ಲಕ್ಷ ಸನಿಹ ಸೋಂಕಿತರು ಪತ್ತೆಯಾಗುತ್ತಿದ್ದ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 36,469 ಕೇಸ್​ಗಳು ಪತ್ತೆಯಾಗಿದ್ದು, 488 ಜನರು ಮೃತಪಟ್ಟಿದ್ದಾರೆ.

ದೇಶದಲ್ಲಿ ಸೋಂಕಿತರ ಸಂಖ್ಯೆ 79,46,429 ಹಾಗೂ ಮೃತರ ಸಂಖ್ಯೆ 1,19,502ಕ್ಕೆ ಏರಿಕೆಯಾಗಿದೆ. ಆದರೆ 72,01,070 ಮಂದಿ ಗುಣಮುಖರಾಗಿದ್ದು, ಮರಣ ಪ್ರಮಾಣ ಶೇ.1.5ಕ್ಕೆ ಇಳಿಕೆಯಾಗಿದೆ. ಇತ್ತ 6,25,857 ಕೇಸ್​ಗಳು ಮಾತ್ರ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

"ಮಾಸ್ಕೇ ನಿಮ್ಮ ಸುರಕ್ಷಾ ಕವಚ. ಯಾವಾಗ ಮನೆಯಿಂದ ಹೊರಗಡೆ ಹೊರಟರೂ ಮಾಸ್ಕ್​ ಹಾಕೋದನ್ನ ಮರೆಯದಿರಿ. 'ದೋ ಗಜ್​ ಕಿ ದೂರಿ, ಮಾಸ್ಕ್​ ಹೈ ಜರೂರಿ' - ವ್ಯಕ್ತಿಯಿಂದ ವ್ಯಕ್ತಿಗೆ ಆರು ಅಡಿ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ತೀರಾ ಅವಶ್ಯಕ" ಎಂದು ಆರೋಗ್ಯ ಇಲಾಖೆ ವಿಡಿಯೋಗಳನ್ನು ಶೇರ್ ಮಾಡಿ ಟ್ವೀಟ್​ ಮಾಡಿದೆ.

ಕೋವಿಡ್​ ಟೆಸ್ಟಿಂಗ್​ ಅಪ್​ಡೇಟ್ಸ್​​

ಅಕ್ಟೋಬರ್ 26ರವರೆಗೆ 10,44,20,894 ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ನಿನ್ನೆ ಒಂದೇ ದಿನ 9,58,116 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

ABOUT THE AUTHOR

...view details