ನವದೆಹಲಿ: ಭಯೋತ್ಪಾದನೆಗೆ ಹಣಕಾಸು ಸಹಾಯ ತಡೆಯುವಂತೆ ಪಾಕಿಸ್ತಾನಕ್ಕೆ ಎಫ್ಎಟಿಎಫ್ ಕಟ್ಟಾಜ್ಞೆ ವಿಧಿಸಿರುವ ಬೆನ್ನಲ್ಲೆ, ಭಾರತ ಸಹ ಈ ಬಗ್ಗೆ ಇನ್ನಾದರೂ ಕ್ರಮ ಕೈಗೊಳ್ಳುವಂತೆ ಹೇಳಿದೆ.
ಅಕ್ಟೋಬರ್ ತಿಂಗಳೊಳಗೆ ಉಗ್ರರಿಗೆ ಹಣಕಾಸು ನೆರವು ನೀಡುವುದನ್ನು ನಿಲ್ಲಿಸಬೇಕು ಎಂದು ಫಿನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ನಿನ್ನೆ ಹೇಳಿತ್ತು. ಇಲ್ಲವಾದರೆ ಪಾಕಿಸ್ತಾನವನ್ನು ಬ್ಲಾಕ್ಲಿಸ್ಟ್ಗೆ ಸೇರಿಸುವುದಾಗಿ ಎಚ್ಚರಿಕೆ ನೀಡಿತ್ತು. ಪಾಕಿಸ್ತಾನವು ಇನ್ನಾದರೂ ಈ ಬಗ್ಗೆ ನಂಬಿಕಾರ್ಹ, ಪರಿಶೀಲನಾರ್ಹ ಹಾಗೂ ಸುಸ್ಥಿರವಾದ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಭಾರತ ಇಂದು ಹೇಳಿದೆ.