ಕರ್ನಾಟಕ

karnataka

ETV Bharat / bharat

ಕೋವಿಡ್​-19: ಶೇ 76ರಷ್ಟು ಚೇತರಿಕೆ ಪ್ರಮಾಣ, ಶೇ 1.84ರಷ್ಟು ಮರಣ ಪ್ರಮಾಣ!

ಕಳೆದ 24 ಗಂಟೆಗಳಲ್ಲಿ 63,173 ಜನರು ಚೇತರಿಸಿಕೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯ ಚೇತರಿಕೆ ಸಕ್ರಿಯ ಪ್ರಕರಣಗಳೊಂದಿಗಿನ ವ್ಯತ್ಯಾಸವನ್ನು 3.5 ಪಟ್ಟು ವಿಸ್ತರಿಸಿದೆ. ಪ್ರಸ್ತುತ ಒಟ್ಟು ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 7,07,267 ಆಗಿದ್ದು, ಒಟ್ಟು ಪಾಸಿಟಿವ್​ ಪ್ರಕರಣಗಳು ಶೇ 21.87ರಷ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Covid recovery
ಕೋವಿಡ್

By

Published : Aug 26, 2020, 9:04 PM IST

ನವದೆಹಲಿ: ಭಾರತವು ಬುಧವಾರ ಕೋವಿಡ್ 19 ಸೋಂಕಿತರ ಚೇತರಿಕೆಯ ಪ್ರಮಾಣ ಶೇ 76ರಷ್ಟು ದಾಖಲಿಸಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 24,67,758ಕ್ಕೆ ತಲುಪಿದೆ.

ಕಳೆದ 24 ಗಂಟೆಗಳಲ್ಲಿ 63,173 ಜನರು ಚೇತರಿಸಿಕೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯ ಚೇತರಿಕೆ ಸಕ್ರಿಯ ಪ್ರಕರಣಗಳೊಂದಿಗಿನ ವ್ಯತ್ಯಾಸ 3.5 ಪಟ್ಟು ವಿಸ್ತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ಒಟ್ಟು ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 7,07,267 ಆಗಿದ್ದು, ಒಟ್ಟು ಪಾಸಿಟಿವ್​ ಪ್ರಕರಣಗಳು ಶೇ 21.87ರಷ್ಟಿದೆ.

ವೇಗದ ಪರೀಕ್ಷೆ ಮತ್ತು ಆಸ್ಪತ್ರೆಗೆ ದಾಖಲಾದ ಪ್ರಕರಣಗಳ ಪರಿಣಾಮಕಾರಿ ಕ್ಲಿನಿಕಲ್ ನಿರ್ವಹಣೆಯ ಮೂಲಕ ಆರಂಭಿಕ ಪತ್ತೆಯನ್ನು ಕೇಂದ್ರ ಮತ್ತು ರಾಜ್ಯಗಳ ಸಮನ್ವಯದಿಂದ ಮಾಡುತ್ತಿವೆ. ಇದರ ಪ್ರಯತ್ನಗಳಿಂದಾಗಿ ಸೋಂಕಿನ ಪ್ರಕರಣಗಳ ಮರಣದ ಪ್ರಮಾಣ ನಿರಂತರವಾಗಿ ಹಿಮ್ಮೆಟ್ಟಿಸಲಾಗಿದೆ. ಇದರಿಂದ ಉತ್ತಮ ಫಲಿತಾಂಶಗಳು ಕಂಡುಬರುತ್ತಿವೆ. ದೇಶದ ಸಾವಿನ ಪ್ರಮಾಣವು ಇಂದಿನವರೆಗೂ ಶೇ 1.84 ರಷ್ಟಿದೆ. ವಿಶ್ವದಲ್ಲಿ ಇದು ಅತ್ಯಂತ ಕಡಿಮೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ಇಲ್ಲಿಯವರೆಗೆ ದೇಶವು 3,76,51,512 ಕೋವಿಡ್​ ಪರೀಕ್ಷೆಗಳನ್ನು ನಡೆಸಿದ್ದು, ಕಳೆದ 24 ಗಂಟೆಗಳಲ್ಲಿ 8,23,992 ಪರೀಕ್ಷೆಗಳನ್ನು ನಡೆಸಲಾಗಿದೆ. ಭಾರತವು ಪ್ರಸ್ತುತ ದೇಶಾದ್ಯಂತ 1540 ಲ್ಯಾಬ್‌ಗಳನ್ನು ಹೊಂದಿದೆ (ಸರ್ಕಾರಿ ಮತ್ತು ಖಾಸಗಿ). ಸಮಯೋಚಿತ ಮತ್ತು ವೇಗದ ಪರೀಕ್ಷೆಯ ಮೂಲಕ ಕೋವಿಡ್​- 19 ಸೋಂಕುಗಳನ್ನು ಆರಂಭದಲ್ಲಿ ಪತ್ತೆ ಹಚ್ಚಲಾಗುತ್ತಿದೆ.

ABOUT THE AUTHOR

...view details