ನವದೆಹಲಿ: ದೇಶಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ ದಿನ ದಿನಕ್ಕೆ ಹೆಚ್ಚಾಗ್ತಿದ್ದು, ಇದರ ಮಧ್ಯೆ ಕಳೆದ 24 ಗಂಟೆಯಲ್ಲಿ ದಾಖಲೆಯ 65 ಸಾವಿರಕ್ಕೂ ಅಧಿಕ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾಗಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
24 ಗಂಟೆಯಲ್ಲಿ 65 ಸಾವಿರಕ್ಕೂ ಅಧಿಕ ಸೋಂಕಿತರು ಗುಣಮುಖ... ದೇಶದಲ್ಲಿ ಶೇ.77ರಷ್ಟು ಚೇತರಿಕೆ - ಕೋವಿಡ್ ಕೇಸ್ ಭಾರತ
ದೇಶಾದ್ಯಂತ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ಇದರ ಮಧ್ಯೆ ಕೂಡ ಡಿಸ್ಚಾರ್ಜ್ ಆಗುತ್ತಿರುವ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡು ಬಂದಿದೆ.
ಸದ್ಯ ದೇಶದಲ್ಲಿ ಗುಣಮುಖ ಸಂಖ್ಯೆ ಸಕ್ರಿಯ ಪ್ರಕರಣಗಳಿಗಿಂತಲೂ 3.61ರಷ್ಟು ಹೆಚ್ಚಾಗಿದ್ದು , ಇದರ ಪ್ರಮಾಣ ಶೇ 77ರಷ್ಟಿದೆ. ಜತೆಗೆ ದೇಶಾದ್ಯಂತ ಈಗಾಗಲೇ 4.3 ಕೋಟಿ ಕೊರೊನಾ ಟೆಸ್ಟ್ ನಡೆಸಲಾಗಿದೆ. ಕಳೆದ ಎರಡು ವಾರದಲ್ಲಿ 1,22,66,514ರಷ್ಟು ಕೊರೊನಾ ಟೆಸ್ಟ್ ನಡೆಸಲಾಗಿದ್ದು, ತಮಿಳುನಾಡು, ಉತ್ತರಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಅತಿ ಹೆಚ್ಚು ಟೆಸ್ಟ್ ನಡೆಸಲಾಗಿದೆ.
ಕಳೆದ 24 ಗಂಟೆಯಲ್ಲಿ 10 ಲಕ್ಷ ಕೊರೊನಾ ಟೆಸ್ಟ್ ನಡೆಸಲಾಗಿದ್ದು, ಸದ್ಯ 36,91,167 ಸಕ್ರಿಯ ಪ್ರಕರಣಗಳ ಪೈಕಿ 7,85,996 ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ 28,39,883 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, 65,288 ಜನರು ಸಾವನ್ನಪ್ಪಿದ್ದಾರೆ.