ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ದಾಖಲೆ ಪ್ರಮಾಣದಲ್ಲಿ ಚೇತರಿಕೆ ಕಂಡು ಬರುತ್ತಿರುವುದರಿಂದ ಜನರಲ್ಲಿ ಹೊಸ ಆಶಾಭಾವನೆ ಮೂಡಿದೆ.
24 ಗಂಟೆಯಲ್ಲಿ ಲಕ್ಷ ಮಂದಿ ಕೋವಿಡ್ನಿಂದ ಗುಣಮುಖ: ರಿಕವರಿಯಲ್ಲಿ ಭಾರತಕ್ಕೆ ಅಗ್ರಸ್ಥಾನ
ಭಾರತದಲ್ಲಿ ಒಂದೇ ದಿನದಲ್ಲಿ 1,01,468 ಮಂದಿ ಕೊರೊನಾದಿಂದ ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣ ಶೇಕಡಾ 80.86ಕ್ಕೆ ತಲುಪಿದೆ.
24 ಗಂಟೆಯಲ್ಲಿ ಒಂದು ಲಕ್ಷ ಮಂದಿ ಕೋವಿಡ್ನಿಂದ ಗುಣಮುಖ
ಒಂದೇ ದಿನದಲ್ಲಿ 1,01,468 ಮಂದಿ ಗುಣಮುಖರಾಗಿದ್ದು, ಈವರೆಗೆ ದೇಶದಲ್ಲಿ 44,97,867 ಸೋಂಕಿತರು ಮಹಾಮಾರಿಯಿಂದ ಚೇತರಿಸಿಕೊಂಡಿದ್ದಾರೆ. ಇದರಿಂದಾಗಿ ಚೇತರಿಕೆ ಪ್ರಮಾಣ ಶೇಕಡಾ 80.86ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿದೆ.
ಪ್ರಪಂಚದಾದ್ಯಂತ 2,31,10,085ಕ್ಕೂ ಹೆಚ್ಚು ಜನರು ಕೋವಿಡ್ನಿಂದ ಗುಣಮುಖರಾಗಿದ್ದು, ಇದರಲ್ಲಿ ಭಾರತದಲ್ಲೇ ಶೇ. 19ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ. ಈ ಮೂಲಕ ಜಾಗತಿಕ ಕೋವಿಡ್ ರಿಕವರಿ ರೇಟ್ನಲ್ಲಿ ಭಾರತ ಅಗ್ರಸ್ಥಾನ ಪಡೆದುಕೊಂಡಿದೆ.