ನವದೆಹಲಿ:ದೇಶದಲ್ಲಿ ದಿನದಿಂದ ದಿನಕ್ಕೆ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ಇದರ ಮಧ್ಯೆ ಭಾರತ ಒಂದೇ ದಿನದಲ್ಲಿ ಅತಿ ಹೆಚ್ಚು ಕೋವಿಡ್ ಟೆಸ್ಟ್ ಮಾಡಿರುವ ಹೊಸ ದಾಖಲೆ ನಿರ್ಮಾಣ ಮಾಡಿದೆ.
ಒಂದೇ ದಿನ 4.2 ಲಕ್ಷ ಕೊರೊನಾ ಟೆಸ್ಟ್... ಹೊಸ ದಾಖಲೆ ನಿರ್ಮಿಸಿದ ಭಾರತ!
ಭಾರತದಲ್ಲಿ ಇಲ್ಲಿಯವರೆಗೆ 8,49,431 ಸೋಂಕಿತರು ಕೋವಿಡ್ನಿಂದ ಗುಣಮುಖರಾಗಿದ್ದು, 31,358 ಜನರು ಸಾವನ್ನಪ್ಪಿದ್ದಾರೆ.
ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಕಳೆದ 24 ಗಂಟೆಯಲ್ಲಿ ಬರೋಬ್ಬರಿ 4 ಲಕ್ಷದ 20 ಸಾವಿರ ಕೋವಿಡ್ ಟೆಸ್ಟ್ ನಡೆಸಿರುವುದಾಗಿ ಹೇಳಿದೆ. ಜನವರಿ ತಿಂಗಳಲ್ಲಿ ಕೇವಲ ಒಂದು ಕೋವಿಡ್ ಟೆಸ್ಟ್ ಕೇಂದ್ರ ಭಾರತದಲ್ಲಿತ್ತು. ಆದರೆ ಇದೀಗ ಅದರ ಸಂಖ್ಯೆ 1,301 ಆಗಿದ್ದು, ಇದರಲ್ಲಿ ಖಾಸಗಿ ಲ್ಯಾಬ್ಗಳು ಸೇರಿಕೊಂಡಿವೆ ಎಂದು ತಿಳಿಸಿದೆ.
ಭಾರತದಲ್ಲಿ ಇಲ್ಲಿಯವರೆಗೆ 1,58,49,068 ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ಕಳೆದ ವಾರದಿಂದ ಪ್ರತಿದಿನ 3.50 ಲಕ್ಷ ಟೆಸ್ಟ್ ನಡೆಯುತ್ತಿದೆ ಎಂದು ತಿಳಿಸಿದೆ. ಇದರ ಜತೆಗೆ ದೇಶದಲ್ಲಿ ಕೋವಿಡ್ನಿಂದ ಗುಣಮುಖರಾಗುತ್ತಿರುವ ಸಂಖ್ಯೆಯಲ್ಲೂ ಏರಿಕೆ ಕಂಡು ಬಂದಿದ್ದು, ಸದ್ಯ ಶೇ. 63.54ರಷ್ಟಿದೆ ಎಂದು ತಿಳಿಸಿದೆ. ಸದ್ಯ ದೇಶದಲ್ಲಿ 3,93,360 ಆ್ಯಕ್ಟೀವ್ ಕೇಸ್ಗಳಿದ್ದು, ನಿನ್ನೆ ಒಂದೇ ದಿನ 48,916 ಜನರಲ್ಲಿ ಕೊರೊನಾ ಕಾಣಿಸಿಕೊಂಡಿದೆ.