ಕರ್ನಾಟಕ

karnataka

ETV Bharat / bharat

ಮೊದಲ ರಫೇಲ್ ಯುದ್ಧ ವಿಮಾನ ಭಾರತಕ್ಕೆ ಹಸ್ತಾಂತರ, ವಾಯುಪಡೆಗೆ ಬಂತು ಭೀಮ ಬಲ! - ಡಸಾಲ್ಟ್​ ಕಂಪನಿ

ಬಹಳಷ್ಟು ವಿವಾದಕ್ಕೆ ಕಾರಣವಾಗಿದ್ದ ಫ್ರಾನ್ಸ್​​ ಕಂಪನಿಯ ರಫೇಲ್​ ಯುದ್ಧ ವಿಮಾನ ಕೊನೆಗೂ ಭಾರತ ಸೇರಿದ್ದು, ಔಪಚಾರಿಕವಾಗಿ ಒಂದು ಯುದ್ಧ ವಿಮಾನವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಅವರಿಗೆ​ ಹಸ್ತಾಂತರ ಮಾಡಲಾಗಿದೆ.

ಮೊದಲ ರಫೇಲ್ ಯುದ್ಧ ವಿಮಾನ ಭಾರತಕ್ಕೆ ಹಸ್ತಾಂತರ

By

Published : Oct 8, 2019, 6:07 PM IST

ಫ್ರಾನ್ಸ್​: ಭಾರೀ ವಿವಾದಕ್ಕೆ ಗ್ರಾಸವಾಗಿದ್ದ ರಫೇಲ್​ ಯುದ್ಧ ವಿಮಾನ ಕೊನೆಗೂ ಭಾರತದ ಶಸ್ತ್ರಾಸ್ತ್ರ ಬತ್ತಳಿಕೆ ಸೇರಿಕೊಂಡಿದೆ. ಫ್ರಾನ್ಸ್​​ನ ಮೆರಿಗ್​ನ್ಯಾಕ್​​ನಲ್ಲಿ ಡಸಾಲ್ಟ್​ ಕಂಪನಿ ಸಿಇಒ ಎರಿಕ್​ ಟ್ರಾಫಿಯರ್​​ ಔಪಚಾರಿಕವಾಗಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರಿಗೆ ಅತ್ಯಾಧುನಿಕ ಫೈಟರ್ ಜೆಟ್ ಹಸ್ತಾಂತರಿಸಿದ್ದಾರೆ.

ಮೊದಲ ರಫೇಲ್ ಯುದ್ಧ ವಿಮಾನ ಭಾರತಕ್ಕೆ ಹಸ್ತಾಂತರ

ಯುದ್ದ ವಿಮಾನ ಹಸ್ತಾಂತರಕ್ಕೂ ಮೊದಲು ಸಚಿವ ರಾಜನಾಥ್​ ಸಿಂಗ್​ ಖುದ್ದಾಗಿ ಪರೀಕ್ಷಾರ್ಥ ಹಾರಾಟ ನಡೆಸಿದರು. ಅಂತಿಮವಾಗಿ ಮೊದಲ ರಫೇಲ್ ಯುದ್ಧ ವಿಮಾನ ಭಾರತದ ಕೈಸೇರಿದ್ದರಿಂದ, ವಾಯುಪಡೆಯ ಶಕ್ತಿ ದ್ವಿಗುಣಗೊಂಡಿದೆ.

2020ರ ವೇಳೆಗೆ ಒಟ್ಟು 36 ರಫೇಲ್​ ಯುದ್ಧ ವಿಮಾನಗಳನ್ನು ಫ್ರಾನ್ಸ್‌ ಭಾರತಕ್ಕೆ ಹಸ್ತಾಂತರಿಸಬೇಕಿದೆ. ಅದಕ್ಕಾಗಿ ಒಟ್ಟು 59 ಸಾವಿರ ಕೋಟಿ ರೂ ಹಣ ಖರ್ಚು ಮಾಡಲಾಗಿದ್ದು, 2016ರಲ್ಲಿ ದಿ. ಮನೋಹರ್‌ ಪರಿಕ್ಕರ್ ಕೇಂದ್ರ ರಕ್ಷಣಾ ಸಚಿವರಾಗಿದ್ದಾಗ ಈ ಒಪ್ಪಂದ ನಡೆದಿತ್ತು.

60,000 ಅಡಿ ಮೇಲಕ್ಕೆ ಹಾರುವ ಸಾಮರ್ಥ್ಯ ಹೊಂದಿದೆ ರಫೇಲ್!
ಅತ್ಯಂತ ವೇಗದ ಯುದ್ಧ ವಿಮಾನವಾಗಿರುವ ರಫೇಲ್, ನಿಮಿಷದಲ್ಲೇ 60,000 ಅಡಿ ಮೇಲಕ್ಕೆ ಕ್ಷಿಪಣಿ ಹೊತ್ತು ಸಾಗುವ ಸಾಮರ್ಥ್ಯ ಹೊಂದಿದೆ. 24,600 ಕೆಜಿ ತೂಕದ ಈ ವಿಮಾನ ಸುಮಾರು 9,545 ಕೆ.ಜಿ ತೂಕದ ಕ್ಷಿಪಣಿ ಹೊತ್ತೊಯ್ಯಬಲ್ಲದು. ತೀವ್ರ ವೇಗದಲ್ಲಿ ಆಗಸ ಸೀಳಿಕೊಂಡು ಶರವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿರುವ ರಫೇಲ್ ಗರಿಷ್ಟ ವೇಗ ಗಂಟೆಗೆ 1,389 ಕಿ.ಮೀ.!

ABOUT THE AUTHOR

...view details