ಹೈದ್ರಾಬಾದ್:ಹೆಚ್ಚುತ್ತಿರುವ ಜನಸಂಖ್ಯೆಯ ಜೊತೆಗೆ ಭಾರತದಲ್ಲಿ ವಾಹನಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರತಿ ವರ್ಷ, ಲಕ್ಷಾಂತರ ಹೊಸ ವಾಹನಗಳು ರಸ್ತೆಗಳಿಯುತ್ತಿವೆ. ಅವುಗಳ ಇಂಗಾಲದ ಹೊರಸೂಸುವಿಕೆಯಿಂದಾಗಿ ಉಂಟಾಗುವ ಮಾಲಿನ್ಯವು ಅಪಾಯಕಾರಿ ಮಟ್ಟಕ್ಕೆ ಬೆಳೆಯುತ್ತಿದೆ. ವಿಶ್ವದ ಅಗ್ರ ಹತ್ತು ಮಾಲಿನ್ಯಕಾರಕ ನಗರಗಳು ಭಾರತದಲ್ಲಿವೆ ಎಂಬ ಅಂಶವು ಪರಿಸ್ಥಿತಿಯ ಗಂಭೀರತೆಯನ್ನು ತೆರೆದಿಡುತ್ತದೆ. ಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ, 1991ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಇಂಗಾಲದ ಹೊರಸೂಸುವಿಕೆಯ ಮೇಲೆ ನಿರ್ಬಂಧಗಳನ್ನು ವಿಧಿಸಲಾಯಿತು. ಅಂದಿನಿಂದ, ಸೀಸ ರಹಿತ ಪೆಟ್ರೋಲ್ ಮಾರಾಟ ಮತ್ತು ಕ್ಯಾಟಲಿಕ್ ಕನ್‌ವರ್ಟರ್‌ಗಳ ಬಳಕೆಯು ವಾಹನಗಳಿಂದ ಮಾಲಿನ್ಯವನ್ನು ಕಡಿಮೆ ಮಾಡಲು ಸಹಕಾರಿ ಮಾರ್ಗಗಳಾಗಿ ಪರಿಣಮಿಸಿವೆ.
ವಾಹನಗಳಿಂದ ಇಂಗಾಲದ ಹೊರಸೂಸುವಿಕೆಯನ್ನು ನಿಯಂತ್ರಿಸಲು ಭಾರತ ಸರ್ಕಾರ 2002ರಲ್ಲಿ ನೇಮಿಸಿದ ಮಾಶೆಲ್ಕರ್ ಸಮಿತಿ ವರದಿಯನ್ನು ಸಿದ್ಧಪಡಿಸಿದೆ. ಯುರೋಪಿಯನ್ ಒಕ್ಕೂಟ ಈಗಾಗಲೇ ತನ್ನ ಇಂಗಾಲದ ಹೊರಸೂಸುವಿಕೆ ನಿಯಂತ್ರಣ ಮಾನದಂಡಗಳನ್ನು ವಿನ್ಯಾಸಗೊಳಿಸಿದೆ ಮತ್ತು ವಿಶ್ವದ ವಾಹನಗಳಿಂದ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಹಲವಾರು ನಿಯಮಗಳನ್ನು ಅಳವಡಿಸಿಕೊಂಡಿದೆ. ಸಮಿತಿಯು ತನ್ನ ವರದಿಗೆ ಅದರ ಮಾನದಂಡವಾಗಿ ಆ ಮಾನದಂಡಗಳನ್ನು ತೆಗೆದುಕೊಂಡಿತು. ಮಾಶೆಲ್ಕರ್ ಸಮಿತಿ ವರದಿಯನ್ನು ಅಂಗೀಕರಿಸಿದ ಕೇಂದ್ರವು 2003ರಲ್ಲಿ ರಾಷ್ಟ್ರೀಯ ವಾಹನ ಇಂಧನ ನೀತಿಯನ್ನು ಘೋಷಿಸಿತು. ಇದಕ್ಕೆ 'ಭಾರತ್ ಸ್ಟೇಜ್' ಎಂದು ಹೆಸರಿಸಲಾಯಿತು ಮತ್ತು ಇದು ಯುರೋ ಮಾನದಂಡಗಳಿಗೆ ಸಮನಾಗಿದೆ. ಇಂಗಾಲದ ಹೊರಸೂಸುವಿಕೆಯ ನಿಯಂತ್ರಣದಲ್ಲಿನ ಬದಲಾವಣೆಗಳ ಪ್ರಕಾರ ಇದನ್ನು ಹಂತ ಹಂತಗಳಲ್ಲಿ ನವೀಕರಿಸಲಾಗುತ್ತಿದೆ. ವಾಹನ ಉತ್ಪಾದನಾ ಉದ್ಯಮದಲ್ಲಿ ಮತ್ತು ಮಾಲಿನ್ಯ ನಿಯಂತ್ರಣಕ್ಕಾಗಿ ಪೆಟ್ರೋ ಉತ್ಪನ್ನಗಳ ತಯಾರಿಕೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಯುರೋ -2 ನಿಯಮಗಳಿಗೆ ಅನುಸಾರವಾಗಿ 2003 ರಲ್ಲಿ ಭಾರತ್ ಸ್ಟೇಜ್ ಅನ್ನು ಪರಿಚಯಿಸಲಾಯಿತು ಮತ್ತು ಅಂದಿನಿಂದ ಆಧುನಿಕ ಯೂರೋ ಮಾನದಂಡಗಳ ಪ್ರಕಾರ ಇದು ಕೂಡ ಬದಲಾಗುತ್ತಿದೆ.
ಈಗಿನ ನೂತನ ಭಾರತ್ ಸ್ಟೇಜ್-6, ಏಪ್ರಿಲ್ 1ರಿಂದ ಕಾರ್ಯರೂಪಕ್ಕೆ ಬರಲಿದೆ. ಭಾರತ್ ಸ್ಟೇಜ್ ಇಂಗಾಲದ ಹೊರಸೂಸುವಿಕೆಯನ್ನು ನಿಯಂತ್ರಿಸುವ ಮತ್ತು ಪರಿಸರ ಸಂರಕ್ಷಣೆಗೆ ಕೊಡುಗೆ ನೀಡುವ ವಾಹನ ಎಂಜಿನ್‌ಗಳ ಮಾನದಂಡಗಳನ್ನು ನಿಗದಿಪಡಿಸುತ್ತದೆ. ಭಾರತ್ ಸ್ಟೇಜ್-6 ಎಂಜಿನ್‌ಗಳಿಗೆ ಹೆಚ್ಚು ಸಂಸ್ಕರಿಸಿದ ಇಂಧನ ಬೇಕಾಗಿರುವುದರಿಂದ, ತೈಲ ಸಂಸ್ಕರಣಾಗಾರಗಳು ತಮ್ಮ ಕಾರ್ಖಾನೆಗಳನ್ನು ಆಧುನೀಕರಿಸಿವೆ. ಇದು ಸಾರ್ವಜನಿಕ ಮತ್ತು ಖಾಸಗಿ ವಲಯದ ಕಂಪನಿಗಳು ಈ ಆಧುನೀಕರಣಕ್ಕೆ 30,000 ಕೋಟಿ ರೂ. ವ್ಯಯಿಸಿವೆ. ಮತ್ತೊಂದೆಡೆ, ಸುಪ್ರೀಂ ಕೋರ್ಟ್ ಆದೇಶದಂತೆ ಬಿಎಸ್ 4 ವಾಹನಗಳ ನೋಂದಣಿ ಮತ್ತು ಮಾರಾಟದ ಗಡುವು ಮಾರ್ಚ್ 31 ಕ್ಕೆ ಮುಕ್ತಾಯಗೊಳ್ಳಲಿದೆ. ಅಲ್ಲಿಂದ ನಂತರ ಈ ವಾಹನಗಳು ರಸ್ತೆಗೆ ಇಳಿಯುವುದಿಲ್ಲ. ಬಿಎಸ್ 6 ವಾಹನಗಳು ಮಾತ್ರ ಏಪ್ರಿಲ್ 1 ರಿಂದ ಮಾರಾಟವಾಗಲಿವೆ. ಕೇಂದ್ರ ಸರ್ಕಾರವು ಬಿಎಸ್ 6 ಅನ್ನು ಇಡೀ ದೇಶದಾದ್ಯಂತದ ಎಲ್ಲ ಮಾರುಕಟ್ಟೆಯಲ್ಲಿ ಜಾರಿಗೆ ತರಲು ಮುಂದಾಗಿದೆ. ಎಲೆಕ್ಟ್ರಿಕ್ ವಾಹನಗಳ ಮೇಲೆ ದೃಷ್ಟಿ ಕೇಂದ್ರೀಕರಿಸಿದೆ. ಇದು ವಾಹನ ಉದ್ಯಮದಲ್ಲಿ ಸ್ವಲ್ಪ ಗೊಂದಲ ಹುಟ್ಟು ಹಾಕಿದೆ. ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಪ್ರವೇಶಿಸಲು ಇನ್ನೂ ಸಾಕಷ್ಟು ಸಮಯವಿದೆ. 2030 ರ ವೇಳೆಗೆ ಎಲೆಕ್ಟ್ರಿಕ್ ವಾಹನಗಳನ್ನು ದೊಡ್ಡ ಪ್ರಮಾಣದಲ್ಲಿ ತರಲು ಕೇಂದ್ರ ಯೋಜಿಸಿದ್ದರೂ, ಅದು ವಿಳಂಬವಾಗುವ ಸಾಧ್ಯತೆ ಇದೆ.
ಹಲವಾರು ಲಾಭಗಳು:
ಬಿಎಸ್ 6 ಮಾನದಂಡಕ್ಕೆ ಸೂಕ್ತವಾದ ಇಂಧನ ಏಪ್ರಿಲ್ 1 ರಿಂದ ರಾಷ್ಟ್ರವ್ಯಾಪಿ ಲಭ್ಯವಿರುತ್ತದೆ. ವಿಮೆ ಮತ್ತು ತೆರಿಗೆಗಳನ್ನು ಹೆಚ್ಚಿಸುವುದರಿಂದ ವಾಹನ ಮಾರಾಟದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಆದಾಗ್ಯೂ ಜಿಎಸ್ಟಿ ಕಡಿಮೆ ಮಾಡುವುದರಿಂದ ವಾಹನ ಮಾರಾಟ ಹೆಚ್ಚಾಗಬಹುದು ಮತ್ತು ಉದ್ಯಮವು ನಷ್ಟದಿಂದ ಚೇತರಿಸಿಕೊಳ್ಳಬಹುದು. 2030ರ ವೇಳೆಗೆ ಭಾರತದ ಆರ್ಥಿಕತೆ 10 ಟ್ರಿಲಿಯನ್ ಡಾಲರ್ ತಲುಪಲಿದೆ ಎಂದು ನೀತಿ ಅಯೋಗ್ ಅಂದಾಜಿಸಿದೆ. ವಾಹನ ಉದ್ಯಮದಲ್ಲಿ, 2025ರ ವೇಳೆಗೆ 150 ಸಿಸಿಗಿಂತ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನ ಮತ್ತು 2023 ರ ವೇಳೆಗೆ ತ್ರಿಚಕ್ರ ವಾಹನಗಳನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. ಇದು ಸರಿಯಾಗಿ ಅನುಷ್ಠಾನಗೊಂಡರೆ ಮಾಲಿನ್ಯಕಾರಕ ವಾಹನಗಳ ಪ್ರಮಾಣ ಪೂರ್ತಿಯಾಗಿ ಕಡಿಮೆಯಾಗಲಿದೆ.
ಎಲೆಕ್ಟ್ರಿಕ್ ವಾಹನಗಳ ನಿರೀಕ್ಷೆಯೊಂದಿಗೆ ಬಿಎಸ್ 6 ಅನುಷ್ಠಾನದ ಬಗ್ಗೆ ಈಗಾಗಲೇ ಚರ್ಚೆಗಳು ಪ್ರಾರಂಭವಾಗಿವೆ. ಎಲೆಕ್ಟ್ರಿಕ್ ವಾಹನಗಳು ಈಗಾಗಲೇ ಮಾರುಕಟ್ಟೆಗೆ ಪ್ರವೇಶಿಸಿವೆ. ಆದಾಗ್ಯೂ, ಸಾಮಾನ್ಯ ವಾಹನಗಳಿಗೆ ಹೋಲಿಸಿದರೆ ಹೆಚ್ಚಿನ ಬೆಲೆಗಳು ಮತ್ತು ಚಾರ್ಜಿಂಗ್ ಪಾಯಿಂಟ್‌ಗಳ ಸೀಮಿತ ಲಭ್ಯತೆ ಮತ್ತು ‘ಬ್ಯಾಕ್ ಅಪ್’ ಸೌಲಭ್ಯಗಳಿಂದಾಗಿ ಅವುಗಳ ಮಾರಾಟ ಸಾಧ್ಯತೆ ಕಡಿಮೆಯಿದೆ. ಹೀಗಾಗಿ ಅವುಗಳನ್ನು ನಗರಗಳೊಳಗಿನ ಅಲ್ಪ ದೂರದ ಪ್ರಯಾಣಕ್ಕೆ ಸೀಮಿತಗೊಳಿಸಲಾಗಿದೆ. ಈ ವಾಹನಗಳಲ್ಲಿ ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಬಳಸಲಾಗುತ್ತದೆ. ಅವುಗಳ ಉತ್ಪಾದನೆಗೆ ಸಂಬಂಧಿಸಿದ ಕಚ್ಚಾ ವಸ್ತುಗಳ ಕೊರತೆಯಿಂದಾಗಿ, ಅವುಗಳ ಉತ್ಪಾದನೆಯು ಉತ್ತೇಜನಕಾರಿಯಲ್ಲ. ಇದಕ್ಕೆ ಅಗತ್ಯ ಬ್ಯಾಟರಿ ಕಚ್ಚಾ ವಸ್ತುಗಳು ಕೆಲವು ದೇಶಗಳಲ್ಲಿ ಮಾತ್ರ ಲಭ್ಯವಿದೆ. ಈ ಕಾರಣ ಮತ್ತು ಇತರ ಹಲವು ಮಿತಿಗಳಿಂದಾಗಿ, ಎಲೆಕ್ಟ್ರಿಕ್ ವಾಹನಗಳು ಸಾಂಪ್ರದಾಯಿಕ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ವಿರುದ್ಧವಾಗಿ ಕನಿಷ್ಠ 15 ವರ್ಷಗಳವರೆಗೆ ಸ್ಪರ್ಧಿಸಲು ಸಾಧ್ಯವಿಲ್ಲ. ಹೀಗಾಗಿ ಆಟೋಮೊಬೈಲ್ ಉದ್ಯಮವು ಯಾವುದೇ ಹಿಂಜರಿಕೆಯಿಲ್ಲದೆ ಮುಂದುವರಿಯಬಹುದು ಎಂದು ತಜ್ಞರು ಭರವಸೆ ನೀಡುತ್ತಾರೆ. ಭವಿಷ್ಯದಲ್ಲಿ ಬ್ಯಾಟರಿ ಚಾರ್ಜಿಂಗ್ ಕೇಂದ್ರಗಳ ಹೆಚ್ಚಿನ ಅಗತ್ಯತೆಯ ದೃಷ್ಟಿಯಿಂದ, ಅನೇಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ವಲಯದಲ್ಲಿ ಹೆಚ್ಚು ಹೂಡಿಕೆ ಮಾಡಲು ಯೋಜಿಸುತ್ತಿವೆ.
ಜಗತ್ತಿನಲ್ಲಿ ಪಳೆಯುಳಿಕೆ ಇಂಧನ ಬಳಕೆ ಕ್ಷೀಣಿಸುತ್ತಿದೆ. ಪೆಟ್ರೋ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಸೌದಿ ಮತ್ತು ರಷ್ಯಾ ನಡುವಿನ ಸ್ಪರ್ಧೆಯು ಅವುಗಳ ಬೆಲೆಯನ್ನು ಕಡಿಮೆ ಮಾಡಿದೆ. ಈ ಫಲಿತಾಂಶದೊಂದಿಗೆ, ಸಾಂಪ್ರದಾಯಿಕ ವಾಹನಗಳ ಬಳಕೆಯನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ಬಿಎಸ್ 6 ನೊಂದಿಗೆ ಇಂಧನದಲ್ಲಿ ಸೀಸ, ಸಲ್ಫರ್, ಕಾರ್ಬನ್ ಮಾನಾಕ್ಸೈಡ್ ಮತ್ತು ಸಾರಜನಕದಂತಹ ಮಾಲಿನ್ಯಕಾರಕಗಳ ಅನಿಲಗಳ ಹೊರಸೂಸುವಿಕೆ ಕಡಿಮೆಯಾಗುತ್ತದೆ. ಈ ಅಂಶಗಳನ್ನು ಗಮನಿಸಿದರೆ ಬಿಎಸ್ 6 ಬಳಕೆಯು ದೇಶಕ್ಕೆ ಹಲವು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ವಾಹನಗಳ ಜೀವಿತಾವಧಿಯನ್ನು 15 ವರ್ಷಕ್ಕೆ ಸೀಮಿತಗೊಳಿಸಲು ಕೇಂದ್ರವು ಚಿಂತಿಸುತ್ತಿದೆ. 15 ವರ್ಷಗಳ ಅವಧಿ ಮುಗಿದ ನಂತರ ವಾಹನಗಳನ್ನು ಗುಜರಿಯಂತೆ ಹೊರಗೆಸೆಯಲು ನಿರ್ಧರಿಸಿದೆ. ಅಂತಹ ನಿರ್ಧಾರ ತೆಗೆದುಕೊಂಡರೆ, ಹೊಸ ವಾಹನಗಳ ಮಾರಾಟ ಮತ್ತೆ ಪುನರುಜ್ಜೀವನಗೊಳ್ಳುತ್ತದೆ.