ನವದೆಹಲಿ:ಗಡಿ ವಿಷಯದಲ್ಲಿ ಕಾಲ್ಕೆರದು ಜಗಳಕ್ಕೆ ಬರುತ್ತಿರುವ ಚೀನಾವು, ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) ಮತ್ತೆ ಕ್ಯಾತೆ ತೆಗೆದಿದೆ. ಉಭಯ ದೇಶಗಳ ಎರಡೂ ಕಡೆಯ ಸೇನಾ ಮುಖ್ಯಸ್ಥರ ನಾಲ್ಕನೇ ಸುತ್ತಿನ ಮಾತುಕತೆಯ ನಂತರ ಎಲ್ಎಸಿಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದ ಚೀನಾ, ಕೊಟ್ಟ ಮಾತನ್ನು ತಪ್ಪಿದೆ.
ಸಂಪೂರ್ಣವಾಗಿ ಪೂರ್ವ ಲಡಾಕ್‌ನಲ್ಲಿ ಚೀನಾ ಸೈನಿಕರು ನಿರ್ಗಮಿಸದ ಕಾರಣ ಎರಡೂ ಸೇನೆಗಳ ನಡುವೆ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಹೀಗಾಗಿ, ಮುಂದಾಗುವ ಅನಾಹುತಗಳಿಗೆ ಚೀನಾಗೆ ದಿಟ್ಟ ಉತ್ತರ ನೀಡಲು ಅಧಿಕ ಸೇನೆಯನ್ನು ಭಾರತೀಯ ಸೇನೆ ರವಾನಿಸಿದೆ. ಎತ್ತರದ ಪ್ರದೇಶಕ್ಕೆ ದೀರ್ಘ ಪ್ರಯಾಣ ಬೆಳೆಸಿ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುತ್ತಿದೆ.
ಶಾಂತಿ ಮರುಸ್ಥಾಪನೆಗೆ ಜುಲೈ 14ರಂದು ನಡೆದಿದ್ದ ಸೇನಾ ಕಮಾಂಡರ್ ಮಟ್ಟದ ಸಭೆಯಲ್ಲಿ ಕೈಗೊಂಡ ಪ್ರಕಾರ, ಎಲ್‌ಎಸಿಯ ಸರೋವರದಿಂದ 2 ಕಿ.ಮೀ ದೂರ ಎರಡೂ ಕಡೆಯ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವುದು ಮತ್ತು ಅಲ್ಲಿನ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರುವುದು.