ಕರ್ನಾಟಕ

karnataka

ETV Bharat / bharat

ಸಿಂಧೂ ನದಿಯ ನೀರಲ್ಲಿ ಇನ್ಮುಂದೆ ನಮಗೇ ಸಿಂಹಪಾಲು, ಭಾರತದ ನಿಲುವಿಗೆ ಪಾಕ್​ ಗಢ ಗಢ - pakistan afraid of india's act

ಸಿಂಧೂ ನದಿಯ ಬಹುಪಾಲು ನೀರು ಪಾಕಿಸ್ತಾನಕ್ಕೆ ಹೋಗುತ್ತದೆ. ಆದರೆ, ಆ ನೀರನ್ನು ಭಾರತದ ಕಡೆಗೆ ತಿರುಗಿಸಿ ಕೃಷಿ ಹ ಆಗೂ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಬಳಸಿಕೊಳ್ಳುವ ಕುರಿತು ಯೋಜನೆ ರೂಪಿಸುತ್ತಿದ್ದೇ ಎಂದು ಕೇಂದ್ರ ಸಚಿವ ಗಜೇಂದ್ರ ಎಸ್​ ಶೇಖಾವತ್ ತಿಳಿಸಿದ್ದಾರೆ.

ಗಜೇಂದ್ರ ಎಸ್​ ಶೇಖಾವತ್

By

Published : Aug 21, 2019, 8:07 PM IST

ನವದೆಹಲಿ: ​ ಭಾರತ ಯಾವುದೇ ಸಮಯದಲ್ಲಿ ಸಿಂಧೂ ನದಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ತನ್ನ ನೆಲವನ್ನು ಬರಿದು ಮಾಡಬಹುದೆಂಬ ಪಾಕಿಸ್ತಾನದ ನಿರೀಕ್ಷೆ ನಿಜವಾಗುವ ಕಾಲ ಸನ್ನಿಹಿತವಾಗಿದೆ.

ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಎಸ್​ ಶೇಖಾವತ್​ ಅವರು ಈ ಕುರಿತು ಒಂದು ಸುಳಿವು ನೀಡಿದ್ದಾರೆ. ಸಿಂಧೂ ನದಿಯ ಬಹುಪಾಲು ನೀರು ಪಾಕಿಸ್ತಾನಕ್ಕೆ ಹೋಗುತ್ತದೆ. ಆದರೆ, ಆ ನೀರನ್ನು ಭಾರತದ ಕಡೆಗೆ ತಿರುಗಿಸಿ ಕೃಷಿ ಹ ಆಗೂ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಬಳಸಿಕೊಳ್ಳುವ ಕುರಿತು ಯೋಜನೆ ರೂಪಿಸುತ್ತಿದ್ದೇವೆ.

ಇದರಿಂದಾಗಿ ಕಾಶ್ಮೀರ ಭಾಗದ ಕೃಷಿ ಚಟುವಟಿಕೆ ಹಾಗೂ ಕೈಗಾರಿಕೋದ್ಯಮ ಅಭಿವೃದ್ಧಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ABOUT THE AUTHOR

...view details