ಇಸ್ಲಾಮಾಬಾದ್: ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಹಕ್ಕನ್ನು ಹಿಂಪಡೆದ ಬೆನ್ನಿಗೇ ಭಾರತ-ಪಾಕ್ ನಡುವಿನ ಸಂಬಂಧ ಇನ್ನಷ್ಟು ಬಿಗಡಾಯಿಸಿದ್ದು, ಪಾಕ್ ಸಚಿವರೂ ಕೂಡ ಬೆಂಕಿ ಹೊತ್ತಿಸುವ ಹೇಳಿಕೆ ನೀಡುತ್ತಿದ್ದಾರೆ.
ಅಕ್ಟೋಬರ್ನಲ್ಲಿ ಭಾರತ-ಪಾಕ್ ವಾರ್ ಫಿಕ್ಸ್: ಬೆಂಕಿ ಹಚ್ಚಿದ ಪಾಕಿಸ್ತಾನ ರೈಲ್ವೆ ಸಚಿವ - indo pak war
ಪಾಕಿಸ್ತಾನದ ರೈಲ್ವೆ ಸಚಿವ ಶೇಕ್ ರಶೀದ್ ಅಹ್ಮದ್, ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ಭಾರತ- ಪಾಕ್ ನಡುವೆ ಯುದ್ಧ ನಡೆಯಬಹುದು ಎಂದು ಹೇಳಿದ್ದಾರೆ.
pak minister
ನಾಲಗೆ ಹರಿಬಿಟ್ಟಿರುವ ಪಾಕಿಸ್ತಾನದ ರೈಲ್ವೆ ಸಚಿವ ಶೇಕ್ ರಶೀದ್ ಅಹ್ಮದ್, ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ಭಾರತ- ಪಾಕ್ ನಡುವೆ ಯುದ್ಧ ನಡೆಯಬಹುದು ಎಂದು ಹೇಳಿದ್ದಾರೆ.
ರಾವಲ್ಪಿಂಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶೇಕ್ ರಶೀದ್, ಕಾಶ್ಮೀರಕ್ಕೆ ಸಂಪೂರ್ಣ ಸ್ವಾತಂತ್ರ್ಯ ಕೊಡಿಸುವ ಅಂತಿಮ ಸಮಯ ಬಂದಿದೆ. ಭಾರತದೊಟ್ಟಿಗಿನ ಕೊನೆಯ ಯುದ್ಧ ಇದಾಗಲಿದೆ ಎಂದು ಹೇಳಿದ್ದಾರೆ.