ನವದೆಹಲಿ: ಗಾಲ್ವಾನ್ ಸಂಘರ್ಷದ ಬಳಿಕ ಚೀನಾದ 59 ಮೊಬೈಲ್ ಆ್ಯಪ್ಗಳನ್ನು ಬ್ಯಾನ್ ಮಾಡಿರುವ ಭಾರತ ಇದೀಗ ಚೀನಾ ವಿರುದ್ಧ ಪ್ರತೀಕಾರ ತಿರಿಸಿಕೊಳ್ಳಲು ಮತ್ತೊಂದು ಮಹತ್ತರ ನಿರ್ಧಾರ ಕೈಗೊಂಡಿದೆ. ಚೀನಾ ಹಾಗೂ ಪಾಕಿಸ್ತಾನದಿಂದ ವಿದ್ಯುತ್ ಉಪಕರಣಗಳ ಆಮದನ್ನು ನಿಲ್ಲಿಸಲು ಸಜ್ಜಾಗಿದೆ.
ಚೀನಾ, ಪಾಕಿಸ್ತಾನದಿಂದ ಭಾರತಕ್ಕೆ ವಿದ್ಯುತ್ ಉಪಕರಣಗಳ ಆಮದು ಸ್ಥಗಿತ: ಆರ್.ಕೆ.ಸಿಂಗ್ - ಆರ್ ಕೆ ಸಿಂಗ್
ಚೀನಾ ಹಾಗೂ ಪಾಕಿಸ್ತಾನದಿಂದ ಭಾರತ ವಿದ್ಯುತ್ ಉಪಕರಣಗಳನ್ನು ಆಮದು ಮಾಡಿಕೊಳ್ಳುವುದಿಲ್ಲ. ಹಾಗೆಯೇ ಆಯಾ ರಾಜ್ಯದ ಡಿಸ್ಕೋಮ್‌ಗಳು ಚೀನಾದ ಸಂಸ್ಥೆಗಳಿಗೆ ಉಪಕರಣಗಳನ್ನು ಪೂರೈಸಲು ಆದೇಶ ನೀಡಬಾರದು ಎಂದು ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್ ಹೇಳಿದ್ದಾರೆ.
ಎಲ್ಲಾ ರಾಜ್ಯಗಳ ಇಂಧನ ಸಚಿವರೊಂದಿಗೆ ವರ್ಚುವಲ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್, ಚೀನಾ ಹಾಗೂ ಪಾಕಿಸ್ತಾನದಿಂದ ಭಾರತ ವಿದ್ಯುತ್ ಉಪಕರಣಗಳನ್ನು ಆಮದು ಮಾಡಿಕೊಳ್ಳುವುದಿಲ್ಲ. ಹಾಗೆಯೇ ಆಯಾ ರಾಜ್ಯದ ಡಿಸ್ಕೋಮ್‌ಗಳು ಚೀನಾದ ಸಂಸ್ಥೆಗಳಿಗೆ ಉಪಕರಣಗಳನ್ನು ಪೂರೈಸಲು ಆದೇಶ ನೀಡಬಾರದು ಎಂದು ಸೂಚಿಸಿದ್ದಾರೆ.
ಭಾರತವು ಚೀನಾದಿಂದ 21,000 ಕೋಟಿ ರೂ. ಸೇರಿದಂತೆ 71,000 ಕೋಟಿ ರೂ. ಮೌಲ್ಯದ ವಿದ್ಯುತ್ ಉಪಕರಣಗಳನ್ನು ಆಮದು ಮಾಡಿಕೊಂಡಿದೆ. ಆದರೆ ಒಂದು ದೇಶವು ನಮ್ಮ ಪ್ರದೇಶವನ್ನು ಅತಿಕ್ರಮಿಸುತ್ತದೆ ಎಂದರೆ ಅದನ್ನು ನಾವು ಸಹಿಸುವುದಿಲ್ಲ. ನಮ್ಮ ದೇಶದಲ್ಲೇ ಎಲ್ಲವನ್ನೂ ತಯಾರಿಸುತ್ತೇವೆ. ಆತ್ಮನಿರ್ಭರ ಭಾರತ್ ಮಿಷನ್ ಅಡಿಯಲ್ಲಿ ಭಾರತದಲ್ಲಿ ಲಭ್ಯವಿರುವ ಯಾವುದೇ ಉಪಕರಣಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುವುದಿಲ್ಲ ಎಂದು ಸಿಂಗ್ ಹೇಳಿದರು.