ನವದೆಹಲಿ: 'ಹೆಚ್ಚು ಪ್ರಜಾಪ್ರಭುತ್ವ' ಇರುವುದರಿಂದ ಭಾರತದಲ್ಲಿ ಕಠಿಣ ಸುಧಾರಣೆಗಳನ್ನು ಕೈಗೊಳ್ಳುವುದು ಕಷ್ಟವಾಗುತ್ತಿದೆ ಎಂದುನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಮಂಗಳವಾರ ಅಭಿಪ್ರಾಯಪಟ್ಟಿದ್ದಾರೆ.
ನಿಯತಕಾಲಿಕೆಯೊಂದರ ವರ್ಚುವಲ್ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಅಮಿತಾಭ್ ಕಾಂತ್ ದೇಶವನ್ನು ಸ್ಪರ್ಧಾತ್ಮಕವಾಗಿಸಲು ಹೆಚ್ಚಿನ ಸುಧಾರಣೆಗಳನ್ನು ಮಾಡಬೇಕಾಗಿದೆ. ಗಣಿಗಾರಿಕೆ, ಕಲ್ಲಿದ್ದಲು, ಕಾರ್ಮಿಕ, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.
ಸರ್ಕಾರವು ಸುಧಾರಣೆ ಕೈಗೊಳ್ಳಲು ರಾಜಕೀಯ ಹಿತಾಸಕ್ತಿ ಅವಶ್ಯಕ ಎಂದು ಹೇಳಿರುವ ಅಮಿತಾಭ್ ಕಾಂತ್ ಸುಧಾರಣೆಗಳು ಸ್ವತಃ ರಾಜ್ಯಗಳಿಂದಲೇ ಆರಂಭವಾಗಬೇಕು. 10-12 ರಾಜ್ಯಗಳ ಅಭಿವೃದ್ಧಿ ದರ ಹೆಚ್ಚಿದೆ. ಇನ್ನೂ ಕೆಲವು ರಾಜ್ಯಗಳ ಅಭಿವೃದ್ಧಿ ಕುಂಠಿತಾವಾಗಿದೆ. ಕೇಂದ್ರಾಡಳಿತ ಪ್ರದೇಶಗಳಿಗೂ ಕೂಡಾ ಸ್ಪರ್ಧಾತ್ಮಕವಾಗಿರುವಂತೆ ನೋಡಿಕೊಳ್ಳಬೇಕಿದೆ ಎಂದು ಸೂಚನೆ ನೀಡಿದ್ದಾರೆ.