ನವದೆಹಲಿ :ಕೊರೊನಾ ವೈರಸ್ ಮಹಾಮಾರಿಯಿಂದ ಇಡೀ ಜಗತ್ತು ತತ್ತರಿಸಿದೆ. ಎಲ್ಲ ಆರ್ಥಿಕ ವಲಯಗಳು ನಷ್ಟಕ್ಕೀಡಾಗಿವೆ. ಪ್ರವಾಸೋದ್ಯಮ ಇಲಾಖೆ ಸಹ ಇದಕ್ಕೆ ಹೊರತಾಗಿಲ್ಲ. ಪ್ರಮುಖ ಪ್ರವಾಸೋದ್ಯಮವಾದ ಭಾರತ-ಮಾಲ್ಡೀವ್ಸ್ ನಡುವಿನ ವಿಮಾನ ಸಂಚಾರವೂ ಮಿತವಾಗಿ ಆರಂಭವಾಗುವ ಸಾಧ್ಯತೆ ಇದೆ. ಭಾರತ ಸೇರಿದಂತೆ ಇಡೀ ವಿಶ್ವವು ಕೊರೊನಾ ವೈರಸ್ ಗೆ ಲಸಿಕೆ ಕಂಡು ಹಿಡಿಯಲು ಹೆಣಗಾಡುತ್ತಿವೆ.
ಈ ಮಧ್ಯೆ, ಕೆಲ ದೇಶಗಳು ಕೊರೊನಾ ಸೋಂಕಿನ ಎರಡನೇ ಅಲೆಯಲ್ಲಿ ಸಿಲುಕಿ ತತ್ತರಿಸುತ್ತಿವೆ. ಈ ಹಿನ್ನೆಲೆ ಜಾಗತಿಕ ಪ್ರವಾಸೋದ್ಯಮವು ಭಾರೀ ಸಂಕಷ್ಟಕ್ಕೆ ಸಿಲುಕಿದ್ದು, ಅಂತಾರಾಷ್ಟ್ರೀಯ ವಿಮಾನ ಪ್ರಯಾಣವೂ ಭಾರೀ ದುಬಾರಿ ಆಗುವ ಸಾಧ್ಯತೆ ಇದೆ ಎನುತ್ತಾರೆ ತಜ್ಞರು. ಈ ಮಧ್ಯೆ, ಕೆಲ ದೇಶಗಳು ದೇಶೀಯ ಪ್ರವಾಸೋದ್ಯಮವನ್ನು ಮತ್ತೆ ಆರಂಭಿಸಿದ್ರೆ, ಮಾಲ್ಡೀವ್ಸ್ನಂತಹ ಕೆಲವು ರಾಷ್ಟ್ರಗಳು ಈ ತಿಂಗಳಿಂದ ಅಂತಾರಾಷ್ಟ್ರೀಯ ಪ್ರವಾಸಿಗರನ್ನ ಸ್ವಾಗತಿಸಲು ಮುಂದಾಗಿವೆ.
ಮಾಲ್ಡೀವ್ಸ್ ದೇಶದ 80 ಪ್ರತಿಶತದಷ್ಟು ಆರ್ಥಿಕತೆಯು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದೆ, ಮುಚ್ಚಿದ ಗಡಿಗಳ ಕಾರಣದಿಂದಾಗಿ ಭಾರತೀಯ ಪ್ರವಾಸಿಗರ ಗಣನೀಯ ಇಳಿಕೆಯ ಹೊರತಾಗಿಯೂ ಕಿರು ದ್ವೀಪ ರಾಷ್ಟ್ರ ಮಾಲ್ಡೀವ್ಸ್ ವಿದೇಶಿ ಪ್ರವಾಸಿಗರಿಗೆ ಸುರಕ್ಷತೆ ಮತ್ತು ನೈರ್ಮಲ್ಯದ ಭರವಸೆ ನೀಡುತ್ತಿದೆ. ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಭಾರತೀಯ ಹೈಕಮಿಷನರ್ ಸಂಜಯ್ ಸುಧೀರ್ ಅವರು, ಅಂತಾರಾಷ್ಟ್ರೀಯ ಪ್ರವಾಸೋದ್ಯಮ ತೆರೆಯುವ ಪ್ರಕ್ರಿಯೆಯಲ್ಲಿ ಈಗಾಗಲೇ ಭಾರೀ ಹೊಡೆತ ತಿಂದಿರುವ ರಾಷ್ಟ್ರದ ಭೌಗೋಳಿಕತೆಯು ಒಂದು ಪ್ರಮುಖ ಅಂಶವಾಗಿದೆ ಎಂದಿದ್ದಾರೆ.
ನಮ್ಮ ಭಾಗದಲ್ಲಿ ಪ್ರವಾಸೋದ್ಯಮವನ್ನು ತೆರೆದ ಮೊದಲ ದೇಶ ಮಾಲ್ಡೀವ್ಸ್ ಆಗಿದೆ. ಜುಲೈ 15 ರಿಂದ 200 ರೆಸಾರ್ಟ್‌ಗಳಲ್ಲಿ ಜನರ ಚಟುವಟಿಕೆ ಆರಭವಾಗಿದೆ. 57-60ರಲ್ಲಿ ಕೆಲಸ ಆರಂಭಿಸಿದ್ದು, ಪ್ರವಾಸಿಗರು ಬರಲು ಆರಂಭವಾಗಿದೆ. ಇಲ್ಲಿ ಎಲ್ಲವೂ ಚದುರಿದ ದ್ವೀಪಗಳಾಗಿರುವುದರಿಂದ ಇಲ್ಲಿನ ಮಾಲೀಕರಿಗೆ ಇವುಗಳನ್ನ ನಿಯಂತ್ರಿಸಲು ಅನುಕೂಲಕರವಾಗಿದೆ. ಆದರೆ, ಅದೇ ಸಮಯದಲ್ಲಿ ರಾಜಧಾನಿಯೂ ಪುರುಷರನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಜನದಟ್ಟಣೆಯ ನಗರವಾಗಿದೆ.
ಒಂದೊಮ್ಮೆ ಇಲ್ಲಿ ಕೋವಿಡ್ ಸೋಂಕು ಹರಡಿದರೆ ನಿಯಂತ್ರಣ ತುಂಬಾ ಕಷ್ಟಕರವಾಗಿರುತ್ತದೆ. ಆದರೆ, ಅಲ್ಲಿ ವಿಮಾನ ನಿಲ್ದಾಣದಲ್ಲಿ ಇಳಿಯುವ ಪ್ರಯಾಣಿಕರಿಗೆ ಒಂದು ರೀತಿಯ ಸುರಕ್ಷಿತ ಮಾರ್ಗ ರಚಿಸಿದ್ದಾರೆ. ಅವರು ನೇರವಾಗಿ ದ್ವೀಪಗಳಿಗೆ ಹೋಗುತ್ತಾರೆ. ಅವರು ಅಲ್ಲಿಯೇ ತಮ್ಮ ಪ್ರವಾಸದ ದಿನಗಳನ್ನು ಕಳೆಯುತ್ತಾರೆ. ಬಳಿಕ ಅವರು ಮತ್ತೆ ನೇರ ವಿಮಾನ ನಿಲ್ದಾಣಕ್ಕೆ ಬಂದು ಹೊರಡುತ್ತಾರೆ, ”ಎಂದು ಸಂಜಯ್ ಸುಧೀರ್ ಹೇಳಿದರು.
ಸುಮಾರು 500,000 ಕಡಿಮೆ ಜನಸಂಖ್ಯೆ ಹೊಂದಿರುವ ಮಾಲ್ಡೀವ್ಸ್ ದೇಶವು ಪ್ರತಿ ವರ್ಷ 1.7 ಮಿಲಿಯನ್ ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಮಾಲ್ಡೀವ್ಸ್‌ಗೆ ಬರುವವರಲ್ಲಿ ಭಾರತೀಯರು ಈಗ 2ನೇ ದೊಡ್ಡ ವಿದೇಶಿ ಪ್ರವಾಸಿಗರಾಗಿದ್ದಾರೆ. ಮಾಲ್ಡೀವ್ಸ್ ಆರ್ಥಿಕ ಚೇತರಿಕೆಗೆ ಹೋರಾಡುತ್ತಿರುವಾಗ, ಭಾರತೀಯ ಪ್ರವಾಸಿಗರು ಭಾರತ-ಮಾಲ್ಡೀವ್ಸ್ ಉಭಯ ದೇಶಗಳ ನಡುವೆ ಸಂಭವನೀಯ ʼಏರ್ ಬಬಲ್’ ರೂಪಿಸಲು ಚರ್ಚೆಗಳು ನಡೆಯುತ್ತಿವೆ ಎಂದು ಸಂಜಯ್ ಸುಧೀರ್ ಖಚಿತಪಡಿಸಿದ್ದಾರೆ.
”ಈ ಹಿಂದೆ ನಾವು 5ನೇ ಸ್ಥಾನದಲ್ಲಿದ್ದೆವು, ನಂತರ ನಮ್ಮ ಪ್ರವಾಸಿಗರು ದ್ವಿಗುಣಗೊಂಡರು ಮತ್ತು ಈಗ ನಾವು ಮಾಲ್ಡೀವ್ಸ್ ಪ್ರವಾಸದಲ್ಲಿ 2ನೇ ಸ್ಥಾನದಲ್ಲಿದ್ದೇವೆ. ಆದರೆ, ಸಂಪರ್ಕದ ಕೊರತೆ ಮತ್ತು ನಮ್ಮದೇ ಆದ ಕೋವಿಡ್ ಪರಿಸ್ಥಿತಿಯಿಂದಾಗಿ ನಮ್ಮ ಪ್ರವಾಸಿಗರ ಆಗಮನವು ಕಡಿಮೆಯಾಗಿದೆ. ಈ ದಿನಗಳಲ್ಲಿ ನಾವು ಏನು ಕೆಲಸ ಮಾಡುತ್ತಿದ್ದೇವೆಂದರೆ ನಾವು ಕೆಲವು ರೀತಿಯ ಏರ್ ಬಬಲ್ ರಚಿಸಬಹುದು. ಇದಕ್ಕಾಗಿ ನಾವು ವಾಯುಯಾನ ಮತ್ತು ಏರ್ ಇಂಡಿಯಾ ಸಚಿವಾಲಯದೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಎಲ್ಲವೂ ಸರಿಯಾಗಿ ನಡೆದರೆ ಭಾರತ ಮತ್ತು ಮಾಲ್ಡೀವ್ಸ್ ನಡುವೆ ಕನಿಷ್ಠ ಕೆಲವು ಸೀಮಿತ ಸಂಖ್ಯೆಯ ವಿಮಾನ ಮಾಲ್ಡೀವ್ಸ್ ಗಳ ಹಾರಾಟ ಆರಂಭವಾಗಲಿದೆ ”ಎಂದು ರಾಯಭಾರಿ ಹೇಳಿದರು.
"ವಿಮಾನ ಸಂಚಾರ ಆರಂಭಕ್ಕೆ ಅವಕಾಶ ಸಿಕ್ಕಿರುವುದು ಎರಡೂ ದೇಶಗಳಿಗೆ ಇದು ಬಹಳ ಮುಖ್ಯವಾಗಿದೆ. ಇಡೀ ದೇಶವು ದ್ವೀಪದ ರಚನೆಯಿಂದಾಗಿ ಪ್ರವಾಸಿಗರಿಗೆ ಇದು ಅತ್ಯಂತ ಸುರಕ್ಷಿತ ಸ್ಥಳವಾಗಿದೆ. ಕೆಲ ಸೋಂಕಿತ ಪ್ರದೇಶಗಳು ಇರುವಲ್ಲಿ ಅಲ್ಲಿನ ಪರಿಸರವೂ ಸೋಂಕಿತ ಪ್ರದೇಶಗಳಾಗಿವೆ. ಆದರೆ, ಅದನ್ನು ಹೊರತುಪಡಿಸಿ ದೊಡ್ಡದಾದ ದೇಶವಾಗಿರುವ ಮಾಲ್ಡೀವ್ಸ್ ತುಂಬಾ ಸುರಕ್ಷಿತವಾಗಿದೆ, ”ಎಂದು ಅವರು ಹೇಳಿದರು.
ಆದಾಗ್ಯೂ ಜಾಗತಿಕ ಆತಿಥ್ಯ ಮತ್ತು ವಾಯುಯಾನ ಕ್ಷೇತ್ರಗಳು ಎದುರಿಸುತ್ತಿರುವ ಹಲವು ಸವಾಲುಗಳಲ್ಲಿ ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಾಟ ನಡೆಸುವ ಜನರ ವಿಶ್ವಾಸವನ್ನು ಗಳಿಸುವುದು ಮುಖ್ಯವಾಗಿದೆ. ಜನಪ್ರಿಯ ಪ್ರವಾಸಿ ತಾಣಗಳಾದ ಥೈಲ್ಯಾಂಡ್ ಅಥವಾ ಯುರೋಪಿಯನ್ ರಾಷ್ಟ್ರಗಳಿಗೆ, ಈಗಲೂ ಕರೆದೊಯ್ಯುವುದು, ಈಗಲೂ ದೇಶೀಯ ಪ್ರವಾಸೋದ್ಯಮದ ಪ್ರಮುಖ ಆದಾಯದ ಮೂಲವಾಗಿದೆ.
“ಇದೀಗ ಹೆಚ್ಚಿನ ಪ್ರಮಾಣದ ಜರ್ಮನ್ನರು ಸ್ವದೇಶದಲ್ಲಿ ಮೊದಲ ಬಾರಿಗೆ ವಿಹಾರಕ್ಕೆ ಹೋಗುತ್ತಿದ್ದಾರೆ. ಮನೆಯಲ್ಲಿ ಎಂದೂ ಕೂರದ ಹೆಚ್ಚಿನ ಜರ್ಮನ್ನರು ದಕ್ಷಿಣ ಯುರೋಪಿಯನ್ ದೇಶಗಳಿಗಳಾದ ಇಟಲಿ, ಸ್ಪೇನ್, ಗ್ರೀಸ್‌ಗೆ ಹೋಗುತ್ತಾರೆ. ಇದೀಗ, ಸ್ಪೇನ್ ದೇಶದಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಭಾರೀ ಏರಿಕೆಯೊಂದಿಗೆ ಅಗ್ರ ಪಟ್ಟಿಯಲ್ಲಿದೆ. ಹೀಗಾಗಿ, ಆ ದೇಶಗಳಿಂದ ಹಿಂದಿರುಗುತ್ತಿರುವ ಪ್ರವಾಸಿಗರ ಬಗ್ಗೆ ನಾವು ಜರ್ಮನಿಯಲ್ಲಿ ಚರ್ಚಿಸುತ್ತಿದ್ದೇವೆ.
ಅವರನ್ನು ಪರೀಕ್ಷಿಸಬೇಕೇ ಅಥವಾ ಕ್ವಾರಂಟೈನ್ ಮಾಡಬೇಕೆ? ಜರ್ಮನಿ ಪ್ರಕಾರ ಥೈಲ್ಯಾಂಡ್ ಮತ್ತು ವಿಯೆಟ್ನಾಂ ಮಾತ್ರ ಧನಾತ್ಮಕ ಪಟ್ಟಿಯಲ್ಲಿರುವ ಏಷ್ಯಾದ 2 ದೇಶಗಳಾಗಿವೆ. ಸೈದ್ಧಾಂತಿಕವಾಗಿ ಚೀನಾ ಅದೇ ಸಾಲಿನಲ್ಲಿದೆ. ಆದರೆ, ಪರಸ್ಪರ ಸಂಬಂಧವಿದ್ದರೆ ಮಾತ್ರ ಅದು ಕೊನೆಗೊಳ್ಳುತ್ತದೆ. ಜರ್ಮನ್ ಪ್ರವಾಸೋದ್ಯಮಕ್ಕೆ ತೊಂದರೆಗಳಿವೆ. ಆದರೆ, ಅವರು ನಿರೀಕ್ಷಿಸಿದಷ್ಟು ದೊಡ್ಡದಲ್ಲ. ಯಾಕೆಂದರೆ, ಹೆಚ್ಚಿನ ಜರ್ಮನ್ನರು ಮನೆಯಲ್ಲಿಯೇ ಇರುತ್ತಾರೆ ”ಎಂದು ದೆಹಲಿಯ ಜರ್ಮನ್ ರಾಯಭಾರ ಕಚೇರಿಯ ಸ್ಪೋಕ್ಪರ್ಸನ್ ಹ್ಯಾನ್ಸ್ ಕ್ರಿಶ್ಚಿಯನ್ ವಿಂಕ್ಲರ್ ವಿವರಿಸಿದರು.
ಆದರೂ, ವಿಮಾನ ಕಾರ್ಯಾಚರಣೆಗೆ ಹೆಚ್ಚಿನ ವೆಚ್ಚ ತಗುಲುವುದರಿಂದ ಅಂತಾರಾಷ್ಟ್ರೀಯ ಪ್ರಯಾಣದ ವೆಚ್ಚವು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ. "ಜರ್ಮನಿಗೆ ಬರುವ ಹೆಚ್ಚಿನ ಜನರು ನಮ್ಮ ನೆರೆಯ ರಾಷ್ಟ್ರಗಳಾದ ಫ್ರಾನ್ಸ್, ನೆದರ್ಲ್ಯಾಂಡ್ಸ್, ಯುಕೆ ಮತ್ತು ಸ್ಪೇನ್‌ನಿಂದ ಬಂದವರು. ಇದು ಜರ್ಮನಿಗೆ ಬರುವ ಪ್ರವಾಸಿಗರ ಸಂಖ್ಯೆಯ ವಿಷಯವಲ್ಲ. ಆದರೆ, ಕಾರ್ಯಾಚರಣೆಯ ವೆಚ್ಚವೂ ಹೆಚ್ಚು ಎನ್ನುವುದೇ ಮುಖ್ಯ. ಭಾರತದಲ್ಲಿದ್ದಂತೆ ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳು ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ, ಫ್ರಾನ್ಸ್ನ ಏರ್ ಫ್ರಾನ್ಸ್ ಅಥವಾ ಜರ್ಮನಿಯ ಲುಫ್ಥಾನ್ಸ ಆಗಿರಬಹುದು ನಮ್ಮ ವಿಮಾನಯಾನ ಸಂಸ್ಥೆಗಳು ಅತ್ಯಂತ ಸಂಕಷ್ಟದ ಪರಿಸ್ಥಿತಿಯನ್ನ ಎದುರಿಸುತ್ತಿವೆ.
ಅವುಗಳ ಉಳಿವು ತೆರಿಗೆದಾರರ ಮೇಲೆ ಆಧಾರತವಾಗಿದೆ. ಆದ್ದರಿಂದ ದಿವಾಳಿಯಿಂದ ರಕ್ಷಿಸಲು ರಾಜ್ಯಗಳು ಈ ಕಂಪನಿಗಳಲ್ಲಿ ಷೇರುಗಳನ್ನು ತೆಗೆದುಕೊಂಡಿವೆ. ಈ ಟ್ರಾವೆಲ್ ಆಪರೇಟರ್ಗಳು ಮತ್ತು ವಿಮಾನಯಾನ ಸಂಸ್ಥೆಗಳು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿವೆ. ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳು ಉಳಿದುಕೊಂಡಿವೆ ಆದರೆ, ಜರ್ಮನಿಯಲ್ಲಿ ಕೆಲವು ಪ್ರಸಿದ್ಧ ರೆಸ್ಟೋರೆಂಟ್ಗಳು ಕಾರ್ಯಾಚರಣೆಗಳ ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ಬೇರೆ ದಾರಿ ಇಲ್ಲದೆ ಮುಚ್ಚಬೇಕಾಯಿತು. ನೀವು ಗ್ರಾಹಕರಿಂದ ತೆಗೆದುಕೊಳ್ಳಬಹುದಾದ ಬೆಲೆಯ ಒಂದು ನಿರ್ದಿಷ್ಟ ಮಿತಿ ಇದೆ. ಆದ್ದರಿಂದ ಅವುಗಳಲ್ಲಿ ಕೆಲವು ಬಹಳ ಸಂಕೀರ್ಣವಾದ ಪರಿಸ್ಥಿತಿಯಲ್ಲಿವೆ ”ಎಂದು ಹ್ಯಾನ್ಸ್ ಕ್ರಿಶ್ಚಿಯನ್ ಎಚ್ಚರಿಸಿದ್ದಾರೆ, ಕೆಲವು ಯುರೋಪಿಯನ್ ರಾಷ್ಟ್ರಗಳು ಎರಡನೇ ಹಂತದ ಕೊರೋನಅ ವೈರಸ್ ಹೊಡೆತಕ್ಕೆ ಸಿಲುಕಿರುವುದರಿಂದ ಸದ್ಯಕ್ಕೆ ಚೇತರಿಕೆಯ ಸಮಯದ ಬಗ್ಗೆ ಮಾತನಾಡುವುದು ಕಷ್ಟ.
ಟ್ರೇಡ್ ಅಂಡ್ ಡೆವಲಪ್ಮೆಂಟ್ (ಯುಎನ್ಸಿಟಿಎಡಿ) ಕುರಿತಂತೆ ಜುಲೈ 1 ರಂದು ಯುಎನ್ ಕಾನ್ಫರೆನ್ಸ್ ಪ್ರಕಟಿಸಿದ ವರದಿಯ ಪ್ರಕಾರ, ವಿಶ್ವ ಪ್ರವಾಸೋದ್ಯಮ ಕ್ಷೇತ್ರವು ಕನಿಷ್ಠ 1.2 ಟ್ರಿಲಿಯನ್ ಅಮೆರಿಕನ್ ಡಾಲರ್ ಅಥವಾ ಜಾಗತಿಕ ಜಿಡಿಪಿಯ 1.5 ಪ್ರತಿಶತವನ್ನು ಕಳೆದುಕೊಳ್ಳುವ ನಿರೀಕ್ಷೆಯಿದೆ . ವಿಶ್ವಸಂಸ್ಥೆ ವಿಶ್ವ ಪ್ರವಾಸೋದ್ಯಮ ಸಂಸ್ಥೆಯ ಅಂದಾಜಿನ ಪ್ರಕಾರ, 2019 ರಲ್ಲಿ 29 ದಶಲಕ್ಷದಷ್ಟಿದ್ದ ಭಾರತದ ಹೊರಹೋಗುವ ಪ್ರವಾಸಿಗರ ಸಂಖ್ಯೆ 2020 ರಲ್ಲಿ 10 ದಶಲಕ್ಷಕ್ಕೆ ಇಳಿಯುವ ನಿರೀಕ್ಷೆ ಇದೆ.
ಆದರೆ ಕೋವಿಡ್ ಸಾಂಕ್ರಾಮಿಕ ವೈರಸ್ ಹರಡುವುದಕ್ಕೂ ಮುಂಚಿತವಾಗಿ, 2017 ರಲ್ಲಿ 23 ದಶಲಕ್ಷದಷ್ಟಿದ್ದ ವಿದೇಶಕ್ಕೆ ಪ್ರಯಾಣಿಸುವ ಭಾರತೀಯರ ಸಂಖ್ಯೆ ಅಂದಾಜು 50 ದಶಲಕ್ಷಕ್ಕೆ ಏರುವ ಸಾಧ್ಯತೆ ಇದೆ ಎಂದು ಅಂದಾಜು ಮಾಡಲಾಗಿತ್ತು. ಸಿಂಗಾಪುರ, ಥೈಲ್ಯಾಂಡ್, ಇಂಡೋನೇಷ್ಯಾ, ಮಾಲ್ಡೀವ್ಸ್ ನೇಪಾಳ, ಶ್ರೀಲಂಕಾ ಭೂತಾನ್ ಭಾರತೀಯರ ಪ್ರವಾಸಿ ತಾಣಗಳಲ್ಲಿ ಅಗ್ರಸ್ಥಾನದಲ್ಲಿದೆ. ಅಂತರರಾಷ್ಟ್ರೀಯ ಪ್ರವಾಸೋದ್ಯಮ ಶೀಘ್ರದಲ್ಲೇ ಪುನರುಜ್ಜೀವನಗೊಳ್ಳುವ ಸಾಧ್ಯತೆಯಿಲ್ಲ ಎಂದು ನವದೆಹಲಿಯ ಪ್ರವಾಸೋದ್ಯಮ ಪ್ರಾಧಿಕಾರದ ನಿರ್ದೇಶಕ ವಚಿರಾಚೈ ಸಿರಿಸುಂಪನ್ ಅಭಿಪ್ರಾಯಪಟ್ಟಿದ್ದಾರೆ.
"ದೇಶೀಯ ಪ್ರವಾಸೋದ್ಯಮವು ಥೈಲ್ಯಾಂಡ್ನಲ್ಲಿ ಸಾಮಾನ್ಯ ಸ್ಥಿತಿಗೆ ಮರಳಿದೆ. ಆದ್ದರಿಂದ ಜನರು ದೇಶಾದ್ಯಂತ ಮುಕ್ತವಾಗಿ ಪ್ರಯಾಣಿಸಬಹುದು. ಅಂತಾರಾಷ್ಟ್ರೀಯ ಪ್ರವಾಸೋದ್ಯಮವು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ, ನಿಖರವಾಗಿ ಯಾವಾಗ ಎಂದು ನಾನು ಹೇಳಲಾರೆ, ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ನಾವು ಸುರಕ್ಷತೆ ಮತ್ತು ಆರ್ಥಿಕ ಸಮತೋಲನವನ್ನು ಹೊಂದುವ ಅವಶ್ಯಕತೆ ಎರಡನ್ನೂ ನೋಡಬೇಕು, ಅದು ಪ್ರತಿ ದೇಶಕ್ಕೂ ಬಹಳ ಸವಾಲಿನ ಸಂಗತಿಯಾಗಿದೆ. ಈ ಹಂತದಲ್ಲಿ ನಾವು ಕ್ರಮೇಣ ತೆರವು ಪ್ರಕ್ರಿಯೆ ಆರಂಭಿಸಿದ್ದೇವೆ. ಮುಖ್ಯವಾಗಿ ಥೈಲ್ಯಾಂಡ್ನಲ್ಲಿ ಕೆಲಸ ಮಾಡುವವರಿಗೆ ಅಥವಾ ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವ ವಿದೇಶಿಯರು ಬರಲು ನಾವು ಅವಕಾಶ ನೀಡಿದ್ದೇವೆ. ಕೋವಿಡ್ ಸಾಂಕ್ರಾಮಿಕದಿಂದ ಥಾಯ್ ಪ್ರವಾಸೋದ್ಯಮವು ದೊಡ್ಡ ನಷ್ಟವನ್ನು ಎದುರಿಸಿದೆ ”ಎಂದು ವಿಶೇಷ ಚರ್ಚೆಯಲ್ಲಿ ಸಿರಿಸಂಪನ್ ಸ್ಮಿತಾ ಶರ್ಮಾ ಅವರಿಗೆ ತಿಳಿಸಿದರು.
ಜಾಗತಿಕ ಪ್ರವಾಸೋದ್ಯಮದ ಪುನರುಜ್ಜೀವನಕ್ಕೆ ಅಂತಾರಾಷ್ಟ್ರೀಯ ಪ್ರವಾಸಿಗರ ನಂಬಿಕೆ ಮತ್ತು ವಿಶ್ವಾಸ ಗಳಿಸುವುದು ಅತ್ಯಂತ ಪ್ರಮುಖ ಎಂದು ಒತ್ತಿ ಹೇಳುತ್ತಾ, ತಮ್ಮ ಹಣಕ್ಕೆ ತಕ್ಕ ಮೌಲ್ಯದ ಪ್ರದೇಶ ಸಿಕ್ಕಿದರೆ ಜನರು ಹೆಚ್ಚಿನ ವೆಚ್ಚದ ಪ್ರದೇಶಗಳಿಗೆ ಪ್ರಯಾಣಿಸಲು ಈಗಲೂ ಬಯಸುತ್ತಾರೆ ಎಂಬುದು ಅವರ ಆಶಯವಾಗಿದೆ. “ಪ್ರತಿ ದೇಶ, ಪ್ರತಿ ಹೋಟೆಲ್, ರೆಸಾರ್ಟ್ ಈಗ ಸ್ಟ್ಯಾಂಡರ್ಡ್ ಆಪರೇಟಿವ್ ಸಿಸ್ಟಂ(SOP) ಜಾರಿಗೆ ತರಬೇಕು. ಸರಬರಾಜು ಮತ್ತು ಬೇಡಿಕೆಗಳ ನಡುವೆ ನಾವು ಸಮತೋಲನ ಸಾಧಿಸಬೇಕಾಗಿದೆ. ನೀವು ಬೆಲೆಗಳನ್ನು ಹೆಚ್ಚಿಸಬೇಕಾದರೆ ನಿಮ್ಮ ಗ್ರಾಹಕರು ಕಾರಣವನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕು. ಗ್ರಾಹಕರು ಇದು ಹಣಕ್ಕೆ ತಕ್ಕ ಮೌಲ್ಯವೆಂದು ಭಾವಿಸಿದಂತೆ, ಅವರು ಆ ಪ್ರವಾಸಕ್ಕಾಗಿ ಹಣ ಪಾವತಿಸಲು ಸಿದ್ಧರಿರುತ್ತಾರೆ ”ಎಂದು ಥಾಯ್ ಪ್ರವಾಸೋದ್ಯಮ ಅಧಿಕಾರಿ ಹೇಳಿದರು.