ಕರ್ನಾಟಕ

karnataka

ETV Bharat / bharat

ದೇಶದ ಖಜಾನೆಗೆ ಕಾರ್ಪೋರೇಟ್‌ ಕನ್ನ: 'ಮಿಸ್ ​ಇನ್​ವಾಯ್ಸಿಂಗ್‌​'ನಡಿ ದೋಚಿದ ದುಡ್ಡೆಷ್ಟು? -

2016 ರಲ್ಲಿ ಭಾರತ, ಚೀನಾ ಒಂದೇ ರಾಷ್ಟ್ರದಿಂದ ಬಹುತೇಕ ಆಮದು ಮಾಡಿಕೊಂಡಿದೆ. ಹೀಗೆ ಒಂದೇ ರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವುದು 'ವಾಣಿಜ್ಯಾತ್ಮಕ ಅಪಾಯ' ಎಂದು ವರದಿಯಲ್ಲಿ ಎಚ್ಚರಿಸಿದೆ.

ಸಾಂದರ್ಭಿಕ ಚಿತ್ರ

By

Published : Jun 6, 2019, 10:01 PM IST

ನವದೆಹಲಿ: ಭಾರತ ತನ್ನ ವಾರ್ಷಿಕ ಆದಾಯದಲ್ಲಿ ನಂಬಲಾಗದಷ್ಟು ಆದಾಯವನ್ನು ಕೇವಲ ''ತಪ್ಪು ದರಪಟ್ಟಿ'' (ಮಿಸ್​ ಇನ್​ವಾಯಿಸ್) ವಹಿವಾಟಿನಿಂದ ಕಳೆದುಕೊಳ್ಳುತ್ತಿದೆ ಎಂಬ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ.

ಅಮೆರಿಕ ಮೂಲದ ಥಿಂಕ್ ಟ್ಯಾಂಕ್ ಗ್ಲೋಬಲ್​ ಫೈನಾನ್ಸಿಯಲ್​ ಇಂಟೆಗ್ರಿಟಿ ಈ ಬಗ್ಗೆ ವರದಿ ಮಾಡಿದೆ. 2016ರ ಭಾರತದ ಒಟ್ಟು ಆದಾಯ ಸಂಗ್ರಹದಲ್ಲಿ ''ಮಿಸ್​ ಇನ್​ವಾಯಿಸ್''ನಿಂದಲೇ ₹ 90 ಸಾವಿರ ಕೋಟಿ ಕತ್ತರಿ ಬಿದ್ದಿದೆ. ಇದು ದೇಶದ ಒಟ್ಟು ಆದಾಯದಲ್ಲಿ ಶೇ 5.5ಕ್ಕೆ ಸಮನಾಗಿದೆ ಎಂದು ತಿಳಿಸಿದೆ.

2016 ರಲ್ಲಿ ಭಾರತದ ಚೀನಾ ಒಂದೇ ರಾಷ್ಟ್ರದಿಂದ ಬಹುತೇಕ ಆಮದು ಮಾಡಿಕೊಂಡಿದೆ. ಹೀಗೆ ಒಂದೇ ರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವುದು ವಾಣಿಜ್ಯಾತ್ಮಕ ಅಪಾಯ ಎಂದು ವರದಿಯಲ್ಲಿ ಎಚ್ಚರಿಸಿದೆ.

ವಹಿವಾಟಿನಲ್ಲಿನ ತಪ್ಪು ದರಪಟ್ಟಿ ನಮೋದಿಸುವಿಕೆ ವಿಶ್ವದಲ್ಲೇ ಅತಿ ಹೆಚ್ಚಾಗಿ ಭಾರತವನ್ನು ಬಾಧಿಸುತ್ತಿದೆ. ಇದರಿಂದ ಬಹುದೊಡ್ಡ ಪ್ರಮಾಣದಲ್ಲಿ ತೆರಿಗೆ ಸಂಗ್ರಹದ ಮೊತ್ತ ಖಜಾನೆಯಿಂದ ಹೊರಗುಳಿಯುತ್ತಿದೆ. ಇನ್​ವಾಯಿಸ್​ನಡಿಯ ಹಣ ಸಾಗರೋತ್ತರ ರಾಷ್ಟ್ರಗಳಿಗೆ ವರ್ಗಾವಣೆ ಆಗುತ್ತಿದೆ ಎಂದು ಜಿಎಫ್​ಐ ತಿಳಿಸಿದೆ.

ಭಾರತ ಸರ್ಕಾರ ತನ್ನ ದೇಶದಲ್ಲಿರುವ ಎಲ್ಲಾ ಎಂಎನ್​ಸಿಗಳಿಗೆ ವಾರ್ಷಿಕ ಆದಾಯ, ಲಾಭಾಂಶ, ನಷ್ಟ, ಮಾರಾಟ, ತೆರಿಗೆ ಪಾವತಿ, ಸಬ್ಸಿಡಿ ಹಾಗೂ ಬೇರೆ ಬೇರೆ ರಾಷ್ಟ್ರಗಳಲ್ಲಿರುವ ಉದ್ಯೋಗಿಗಳ ಮಾಹಿತಿ ನೀಡುವಂತೆ ಆದೇಶಿಸಬೇಕು ಎಂದು ಸಲಹೆ ನೀಡಿದೆ.

ಭಾರತಕ್ಕೆ ಮಿಸ್​ಇನ್​ವಾಯಿಸ್​ನಿಂದ ವಾರ್ಷಿಕ ಒಟ್ಟು 13 ಬಿಲಿಯನ್ ಡಾಲರ್​ ನಷ್ಟವಾಗುತ್ತಿದೆ. ಇದರಲ್ಲಿ 9 ಬಿಲಿಯನ್ ಡಾಲರ್​ ಆಮದು ಮಿಸ್​ಇನ್​ವಾಯಿಸ್​ (ಪಾವತಿಯಾಗದ 3.4 ಬಿಲಿಯನ್​ ಡಾಲರ್​ ವ್ಯಾಟ್​), ಪಾವತಿಯಾಗದ ಕಸ್ಟಮ್ಸ್ ಸುಂಕ (2 ಬಿಲಿಯನ್ ಡಾಲರ್)​ ಹಾಗೂ ಪಾವತಿಯಾಗದ ಕಾರ್ಪೊರೇಟ್​ ಆದಾಯ ತೆರಿಗೆ ಪಾಲು 3.6 ಬಿಲಿಯನ್ ಡಾಲರ್​ ಎಂದು ವರದಿ ವಿವರಿಸಿದೆ.

For All Latest Updates

TAGGED:

ABOUT THE AUTHOR

...view details