ನವದೆಹಲಿ:ಭಾರತೀಯ ಸಶಸ್ತ್ರ ಪಡೆ ಮತ್ತು ಜಪಾನ್‌ನ ಸ್ವರಕ್ಷಣಾ ಪಡೆಗಳ ನಡುವೆ ಸರಬರಾಜು ಮತ್ತು ಸೇವೆಗಳ ಪರಸ್ಪರ ನಿಬಂಧನೆ ಕುರಿತು ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿವೆ. ಈ ಒಪ್ಪಂದಕ್ಕೆ ರಕ್ಷಣಾ ಕಾರ್ಯದರ್ಶಿ ಡಾ.ಅಜಯ್ ಕುಮಾರ್ ಮತ್ತು ಜಪಾನ್ ರಾಯಭಾರಿ ಸುಜುಕಿ ಸಟೋಶಿ ಬುಧವಾರ ಸಹಿ ಹಾಕಿದರು.
ಒಪ್ಪಂದವು ದ್ವಿಪಕ್ಷೀಯ ತರಬೇತಿ ಚಟುವಟಿಕೆಗಳು, ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳು, ಮಾನವೀಯ ಅಂತರರಾಷ್ಟ್ರೀಯ ಪರಿಹಾರ ಹಾಗೂ ಭಾರತ ಮತ್ತು ಜಪಾನ್‌ನ ಸಶಸ್ತ್ರ ಪಡೆಗಳ ನಡುವಿನ ನಿಕಟ ಸಹಕಾರಕ್ಕಾಗಿ ಅನುವು ಮಾಡಿ ಕೊಡಲಿದೆ.
"ಈ ಒಪ್ಪಂದವು ಭಾರತ ಮತ್ತು ಜಪಾನ್ ಸಶಸ್ತ್ರ ಪಡೆಗಳ ನಡುವಿನ ಪರಸ್ಪರ ಕಾರ್ಯಾಚರಣೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಉಭಯ ದೇಶಗಳ ನಡುವಿನ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವದ ಅಡಿಯಲ್ಲಿ ದ್ವಿಪಕ್ಷೀಯ ರಕ್ಷಣಾ ಕಾರ್ಯಗಳು ಹೆಚ್ಚುತ್ತವೆ" ಎಂದು ಭಾರತೀಯ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಭಾರತ ಮತ್ತು ಜಪಾನ್ ಸಹ ಪ್ರಮುಖ ಮಿಲಿಟರಿ ಲಾಜಿಸ್ಟಿಕ್ ಒಪ್ಪಂದ, ಸ್ವಾಧೀನ ಮತ್ತು ಕ್ರಾಸ್ ಸರ್ವಿಂಗ್ ಅಗ್ರಿಮೆಂಟ್(ಎಸಿಎಸ್ಎ) ಗೆ ಸಹಿ ಹಾಕುವ ನಿರೀಕ್ಷೆಯಿದೆ. ಕೆಲವು ಜಪಾನಿನ ಉತ್ಪಾದನಾ ಘಟಕಗಳು ಭಾರತಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆಯ ಬಗ್ಗೆ ಚರ್ಚಿಸುತ್ತವೆ.