ಕರ್ನಾಟಕ

karnataka

ETV Bharat / bharat

ಪಾಕಿಸ್ತಾನದಲ್ಲಿ ಇಬ್ಬರು ಅಧಿಕಾರಿಗಳ ಬಂಧನ.. ತಕ್ಷಣ ಬಿಡುಗಡೆಗೆ ಭಾರತ ಒತ್ತಾಯ - ಪಾಕಿಸ್ತಾನದಲ್ಲಿ ಭಾರತೀಯ ಅಧಿಕಾರಿಗಳ ಬಂಧನ

ಭಾರತೀಯ ಅಧಿಕಾರಿಗಳ ಸುರಕ್ಷತೆಯ ಜವಾಬ್ದಾರಿ ಪಾಕಿಸ್ತಾನದ ಅಧಿಕಾರಿಗಳ ಮೇಲಿದೆ ಎಂದು ಭಾರತ ಸ್ಪಷ್ಟಪಡಿಸಿದ್ದು, ಕಿರುಕುಳ ನೀಡುವಂತಿಲ್ಲ ಎಂದಿದೆ.

India summons Pak diplomat over arrest of two officials
ಪಾಕಿಸ್ತಾನದಲ್ಲಿ ಭಾರತೀಯ ಅಧಿಕಾರಿಗಳ ಬಂಧನ

By

Published : Jun 15, 2020, 8:50 PM IST

ನವದೆಹಲಿ: ಇಂದು ಬೆಳಗ್ಗೆ ಪಾಕಿಸ್ತಾನದಲ್ಲಿ ಕಾಣೆಯಾಗಿದ್ದ ಇಬ್ಬರು ಭಾರತೀಯ ಅಧಿಕಾರಿಗಳನ್ನು ಬಂಧಿಸಲಾಗಿದ್ದು, ಈ ಬಗ್ಗೆ ಪಾಕ್ ರಾಜತಾಂತ್ರಿಕರನ್ನು ಕಡೆಸಿದ ಭಾರತ ಘಟನೆ ಕುರಿತು ಪ್ರಶ್ನೆ ಮಾಡಿದೆ.

ಇಂದು ಬೆಳಗ್ಗೆ ಇಬ್ಬರು ಸಿಐಎಸ್ಎಫ್ ಸಿಬ್ಬಂದಿ, ಇಸ್ಲಾಮಾಬಾದ್‌ನಲ್ಲಿ ಕಾಣೆಯಾಗಿದ್ದರು. ಭಾರತೀಯ ಹೈಕಮಿಷನ್ ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಈ ವಿಷಯವನ್ನು ಪ್ರಶ್ನಿಸಿದಾಗ ಇಬ್ಬರು ಅಧಿಕಾರಿಗಳು ಸುಮಾರು ಎರಡು ಗಂಟೆಗಳ ಕಾಲ ಪತ್ತೆಯಾಗಿರಲಿಲ್ಲ ಎಂದು ತಿಳಿದುಬಂದಿದೆ.

ಅಧಿಕಾರಿಗಳನ್ನು ಪಾಕಿಸ್ತಾನ ಗುಪ್ತಚರ ಸಂಸ್ಥೆ ವಶಕ್ಕೆ ಪಡೆದಿರಬಹುದು ಎಂದು ಶಂಕಿಸಲಾಗಿತ್ತು. ನಂತರ ಪಾಕಿಸ್ತಾನದ ಮಾಧ್ಯಮಗಳು ಸ್ಥಳೀಯ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಭಾರತೀಯ ಅಧಿಕಾರಿಗಳು ಹಿಟ್ ಅಂಡ್ ರನ್ ಪ್ರಕರಣದಲ್ಲಿ ಭಾಗಿಯಾಗಿದ್ದು, ಅವರನ್ನು ಬಂಧಿಸಿಲಾಗಿದೆ ಎಂದು ವರದಿ ಮಾಡಿದ್ದವು.

ಮೂಲಗಳ ಪ್ರಕಾರ ದೆಹಲಿಯ ಕಾರ್ಯಕಾರಿ ಪಾಕಿಸ್ತಾನಿ ಹೈಕಮಿಷನರ್ ಸೈಯದ್ ಹೈದರ್ ಷಾ ಅವರನ್ನು ಇಂದು ಮಧ್ಯಾಹ್ನ ವಿದೇಶಾಂಗ ಸಚಿವಾಲಯಕ್ಕೆ ಕರೆಸಲಾಯಿತು. ಈ ವೇಳೆ ಭಾರತೀಯ ಅಧಿಕಾರಿಗಳನ್ನು ವಿಚಾರಣೆ ನಡೆಸುವುದು ಅಥವಾ ಕಿರುಕುಳ ನೀಡುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಂಬಂಧಪಟ್ಟ ರಾಜತಾಂತ್ರಿಕ ಸಿಬ್ಬಂದಿ ಸುರಕ್ಷತೆಯ ಜವಾಬ್ದಾರಿ ಪಾಕಿಸ್ತಾನದ ಅಧಿಕಾರಿಗಳ ಮೇಲಿದೆ ಎಂದು ಮೂಲಗಳು ತಿಳಿಸಿವೆ.

ಹಿಟ್ ಅಂಡ್ ರನ್ ಪ್ರಕರಣದಲ್ಲಿ ಭಾರತೀಯ ಅಧಿಕಾರಿಗಳನ್ನು ಬಂಧಿಸಿರುವ ಬಗ್ಗೆ ಪಾಕಿಸ್ತಾನದ ಅಧಿಕಾರಿಗಳು ಅಧಿಕೃತವಾಗಿ ತಿಳಿಸಿಲ್ಲ ಎಂದು ಹೇಳಿದ್ದಾರೆ. ಅಧಿಕೃತ ಕಾರಿನೊಂದಿಗೆ ಇಬ್ಬರು ಅಧಿಕಾರಿಗಳನ್ನು ತಕ್ಷಣವೇ ಹೈಕಮಿಷನ್​ಗೆ ಹಿಂದಿರುಗಿಸಲು ಪಾಕಿಸ್ತಾನಕ್ಕೆ ಕೇಳಲಾಯಿತು ಎಂದು ಭಾರತದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ABOUT THE AUTHOR

...view details